Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ನಂದಾವರ ಕ್ಷೇತ್ರದಲ್ಲಿ ಮೇ.24 ಸಾಮೂಹಿಕ ವಿವಾಹ.... - VarthaLoka
ಸುದ್ದಿ

ನಂದಾವರ ಕ್ಷೇತ್ರದಲ್ಲಿ ಮೇ.24 ಸಾಮೂಹಿಕ ವಿವಾಹ….

ಬಂಟ್ವಾಳ: ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಮೇ.24 ರಂದು ಸರಕಾರದ ನಿರ್ದೇಶನದಂತೆ ಸಾಮೂಹಿಕ ವಿವಾಹ ನಡೆಯಲಿದೆ. ಕರ್ನಾಟಕ ಸರಕಾರ ಹಿಂದು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯುವ ವಿವಾಹದಲ್ಲಿ ವರನಿಗೆ ರೂ.5 ಸಾವಿರ ವಧುವಿಗೆ ರೂ.10 ಸಾವಿರ ಮತ್ತು ಚಿನ್ನದ ತಾಳಿ ಸೇರಿದಂತೆ ಚಿನ್ನಕ್ಕಾಗಿ ರೂ. 40 ಸಾವಿರ ನೀಡಲಾಗುತ್ತದೆ.
ವಧೂವರರು ವಿವಾಹ ನೋಂದಾಯಿಸಿಕೊಳ್ಳಲು ಎ.25 ಕೊನೆಯ ದಿನಾಂಕವಾಗಿದ್ದು, 30 ರಂದು ವಧೂವರರ ವಿವರ ದೇವಾಲಯದಲ್ಲಿ ಪ್ರಕಟಿಸಲಾಗುವುದು. ವಧೂವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮೇ.4 ಕೊನೆಯ ದಿನವಾಗಿದ್ದು, ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧೂವರರ ಪಟ್ಟಿಯನ್ನು ಮೇ.9ರಂದು ಪ್ರಕಟಿಸಲಾಗುವುದು ಎಂದು ನಂದಾವರ ಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ಹರಿಶ್ಚಂದ್ರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದೇವಸ್ಥಾನದ ದೂರವಾಣಿ ಸಂಖ್ಯೆ 9480280091 , 08255-280091 ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button