ಕಲೆ/ಸಾಹಿತ್ಯ

ನಿನ್ನೊಲವು…

ನಿನ್ನೊಲವು…

ಯಾಕೋ ಕಾಣೆ ನಿನ್ನೊಲವು
ನನ್ನೇ ಮರೆಸಿದೆ
ನಿನ್ನ ಸುಖದ ಹೊರತು ಮಾತು
ಬೇಡವಾಗಿದೆ

ನಿನ್ನ ನೆನಪೆ ಮನದ ತುಂಬ
ಹೂವ ಹಾಸಿದೆ
ಬಿಸಿಲಿನಲ್ಲೂ ತಂಪನೀಡಿ
ತನುವ ಕಾದಿದೆ

ನಿನ್ನ ದನಿಯ ಒಲವ ಕರೆಗೆ
ಮನವು ಸೋತಿದೆ
ಹೃದಯದಲ್ಲಿನ ಪ್ರತಿ ಬಡಿತವು
ನೀನೆಯೆನಿಸಿದೆ

ಬೇರೆಯೇನು ಬಯಸದಂತೆ
ಜೊತೆಯ ನೀಡಿದೆ
ಬದುಕಿನಲ್ಲಿ ಚೆಲುವು ಹಂಚಿ
ತೃಪ್ತಿ ತುಂಬಿದೆ

ರಚನೆ: ಡಾ. ವೀಣಾ ಎನ್ ಸುಳ್ಯ

Advertisement

Related Articles

Back to top button