ಪವಿತ್ರ ರಂಜಾನ್ ಮನೆಯಲ್ಲಿಯೇ ಆಚರಿಸುವಂತೆ ಅಬ್ದುಲ್ ರಹಿಮಾನ್ ವಿನಂತಿ…
ಸುಳ್ಯ: ಕೊರೊನ ವೈರಸ್ ನಿಂದ ಈಗಾಗಲೇ ಪ್ರಪಂಚ ತತ್ತರಿಸಿ ಹೋಗಿದೆ. ಕರ್ನಾಟಕದಲ್ಲಿ ಕೊರೊನ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿ ಇದೆ. ಲಾಕ್ ಡೌನ್ ಮೇ.3ರ ವರೆಗೆ ಮುಂದುವರಿದಿದೆ. ಇದರ ನಡುವೆ ಪವಿತ್ರ ರಂಜಾನ್ ಹಬ್ಬ ಬಂದಿರುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವು ತರಾವೀಹ್ ನಮಾಝ್, ಇಫ್ತಾರ್ ಕೂಟ, ಸಾಮೂಹಿಕ ನಮಾಝ್, ಶುಕ್ರವಾರದ ಪ್ರಾರ್ಥನೆ, ಇವೆಲ್ಲವನ್ನೂ ಮನೆಯಲ್ಲೇ ನಿರ್ವಹಿಸಿ ಸಹಕರಿಸಬೇಕಾಗಿದೆ. ಕೋವಿಡ್ 19 ವಿರುದ್ಧದ ಕಾರ್ಯಾಚರಣೆಯಲ್ಲಿ ಈವರೆಗೆ ಸಹಕರಿಸಿದಂತೆ ಇನ್ನು ಮುಂದೆಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಕಾನೂನು ಪಾಲಕರ ಸೂಚನೆಗಳನ್ನು ಪಾಲಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ನ ಸದಸ್ಯರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.