Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಪಶ್ಚಿಮಘಟ್ಟ ದಲ್ಲಿ ಭಾರಿ ಮಳೆ- ಆದಿ ಸುಬ್ರಹ್ಮಣ್ಯ ದೇವಸ್ಥಾನ ಜಲಾವೃತ….

ಸುಬ್ರಹ್ಮಣ್ಯ: ಪಶ್ಚಿಮಘಟ್ಟದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ‌ ಕುಕ್ಕೆ ಸುಬ್ರಹ್ಮಣ್ಯ ದ ದರ್ಪಣ ತೀರ್ಥ ನದಿ ಉಕ್ಕಿ ಹರಿಯಲಾರಂಭಿಸಿದೆ.ಕುಮಾರ ಪರ್ವತದಿಂದ ಬರುತ್ತಿರುವ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಕುಕ್ಕೆ ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ‌ ಸುಬ್ರಹ್ಮಣ್ಯ ಸಂಪರ್ಕಿಸುವ ಕಿರು ಸೇತುವೆಯೂ ಮುಳುಗಡೆಯಾಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button