Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135
ಪುತ್ತೂರು ಲಾಡ್ಜ್ ನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ - ಯುವಕನಿಗೆ ನ್ಯಾಯಾಂಗ ಬಂಧನ, ಪೋಕ್ಸೋ ದಾಖಲು.... - VarthaLoka
ಸುದ್ದಿ

ಪುತ್ತೂರು ಲಾಡ್ಜ್ ನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ – ಯುವಕನಿಗೆ ನ್ಯಾಯಾಂಗ ಬಂಧನ, ಪೋಕ್ಸೋ ದಾಖಲು….

ಪುತ್ತೂರು: ದರ್ಭೆಯ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಯುವ ಜೋಡಿ ಪತ್ತೆಯಾದ ಪ್ರಕರಣದಲ್ಲಿ ಯುವಕನ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಮುಂಬಯಿಯ ಯುವಕ ಅಬ್ದುಲ್ ತಯ್ಯದ್ (19) ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು,
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ, ಸ್ಥಳೀಯವಾಗಿ ವಾಸ್ತವ್ಯ ಹೊಂದಿರುವ ರಾಜಸ್ತಾನ ಮೂಲದ ಕಾಲೇಜು ವಿದ್ಯಾರ್ಥಿನಿ ಯುವತಿಯನ್ನು ವಸತಿಗೃಹಕ್ಕೆ ಕರೆಯಿಸಿಕೊಂಡಿದ್ದಾನೆ. ಈ ವೇಳೆ ಇವರಿಬ್ಬರು ಹೊಟೇಲ್ ನಲ್ಲಿರುವ ಮಾಹಿತಿ ಪಡೆದು ಪತ್ತೆಹಚ್ಚಿದ ಹಿಂದೂ ಸಂಘಟಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು, ಯುವತಿಯ ಹೆತ್ತವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅರೋಪಿ ತಯ್ಯದ್ ಜೂನ್ ತಿಂಗಳಿನಲ್ಲಿ ಕೂಡ ಆಗಮಿಸಿ ಅದೇ ಹೊಟೇಲ್ ನಲ್ಲಿ ತಂಗಿದ್ದ. ಈ ವೇಳೆ ಯುವತಿಯನ್ನು ರೂಂಗೆ ಕರೆಯಿಸಿಕೊಂಡಿದ್ದ ಆತ ಯುವತಿ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದೀಗ ಎರಡನೇ ಬಾರಿ ಸಂತ್ರಸ್ಥ ಯುವತಿಯನ್ನು ಲಾಡ್ಜ್ ಗೆ ಬರಹೇಳಿದ್ದು, ಭೇಟಿಯಾಗಲು ತೆರಳಿದ ಆಕೆಗೆ ಲಾಡ್ಜ್ ನಲ್ಲಿ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Related Articles

Leave a Reply

Your email address will not be published. Required fields are marked *

Back to top button