ಸುದ್ದಿ

ಪುತ್ತೂರು ವಿವೇಕಾನಂದದಲ್ಲಿ ‘ಸುಪಥ’ ರಾಜ್ಯಮಟ್ಟದ ವಿಚಾರ ಸಂಕಿರಣ…..

ಪುತ್ತೂರು: ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿವೇಕಾನಂದ ಪದವಿ, ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಹಾಗೂ ಕರ್ನಾಟಕ ಫೋರಂ ಫಾರ್ ಇಂಟಗ್ರೆಟೆಡ್ ನ್ಯಾಶನಲ್ ಸೆಕ್ಯುರಿಟಿ ಸಹಯೋಗದಲ್ಲಿ ‘ಏಲಿಯನೇಶನ್ ಆಫ್ ಯೂತ್ ಆ್ಯಂಡ್ ಸೊಲ್ಯುಷನ್ಸ್’ ಎಂಬ ವಿಷಯದ ಕುರಿತ ‘ಸುಪಥ’ ರಾಜ್ಯಮಟ್ಟದ ವಿಚಾರಸಂಕಿರಣ ಸೆ. ೭ರಂದು ನಡೆಯಿತು.
ಮೊದಲ ಗೋಷ್ಠಿಯಲ್ಲಿ ಮಾದಕ ವ್ಯಸನಗಳಿಂದ ಉಂಟಾಗುವ ಪರಿಣಾಮ ಎಂಬ ವಿಷಯದ ಕುರಿತು ಮಂಗಳೂರು ವಿಭಾಗದ ಪೊಲೀಸ್ ಕಮಿಷನರ್ ಡಾ.ಪಿ. ಎಸ್. ಹರ್ಷ ಮಾತನಾಡಿ, ಅಮಾಯಕ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಅನೈತಿಕ ಚಟುವಟಿಕೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಈ ಬೆಳವಣಿಗೆಯೇ ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಾಗಾಗಿ ಯುವಕರು ಈ ಬಗ್ಗೆ ಎಚ್ಚರವಹಿಸಿ ತಮ್ಮ ಜೀವನವನ್ನು ರೂಪಿಸುವ ಕೆಲಸವನ್ನು ಮಾಡಬೇಕು ಎಂದರು.
ಎರಡನೇ ಗೋಷ್ಠಿಯಲ್ಲಿ ವರ್ತಮಾನದ ವಿಚಾರಗಳ ಕುರಿತು ಬೆಂಗಳೂರಿನ ಹಿರಿಯ ವಕೀಲ, ಫೋರಂ ಫಾರ್ ಇಂಟಗ್ರೆಟೆಡ್ ನ್ಯಾಶನಲ್ ಸೆಕ್ಯುರಿಟಿಯ ರಾಷ್ಟ್ರೀಯ ಕಾರ್ಯದರ್ಶಿ ವಿ. ಎಸ್. ಹೆಗ್ಡೆ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಭಾರತದಲ್ಲಿ ನಾನಾ ರೀತಿಯಲ್ಲಿ ಹೇರುತ್ತಿರುವ ಪರಿಣಾಮವಾಗಿ ಯುವಕರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದನ್ನು ಆಧುನಿಕ ಬದುಕು ಅಥವಾ ಜೀವನವೆಂದುಕೊಳ್ಳುತ್ತಿದ್ದಾರೆ. ಇದು ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ಮೂಲೆಗುಂಪನ್ನಾಗಿ ಮಾಡುತ್ತಿದೆ. ಆದ್ದರಿಂದ ಭಾರತದ ಮೌಲ್ಯವನ್ನು ಅರ್ಥಮಾಡಿಕೊಂಡು ಯುವಕರು ಮೌಲ್ಯಗಳನ್ನು ಸ್ವೀಕರಿಸುವಂತಾಗಬೇಕು. ಬೇರೆ ಸಂಪ್ರದಾಯವನ್ನು ಅನುಕರಿಸುವುದು ನಿಲ್ಲಬೇಕು ಎಂದರು.
ಮೂರನೇ ಗೋಷ್ಠಿಯಲ್ಲಿ ನಗರ ನಕ್ಸಲತೆ ಎಂಬ ವಿಷಯದ ಕುರಿತು ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ, ಅಂಕಣಕಾರ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ಯುವ ಜನತೆ ಭಾರತೀಯ ಶಿಕ್ಷಣವನ್ನು ಕಲಿಯುವುದರ ಹೊರತಾಗಿ ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಮೂಲಕ ಭಾರತದ ವಿಚಾರವನ್ನು ದೂಷಿಸುತ್ತಿದ್ದಾರೆ. ಆದರೆ ಯುವ ಜನತೆ ಇಂತಹ ಪ್ರಭಾವಿಗಳ ಜಾಲಕ್ಕೆ ಬಿದ್ದು ಇಂದು ನಗರ ನಕ್ಸಲರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಇದು ಸಲ್ಲದು ಎಂದರು.
ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ. ವಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ವಿವೇಕಾನಂದ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರಂತ ವಿಜಯ ಗಣಪತಿ ರಮೇಶ್, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶೇಖರ ಅಯ್ಯರ್ ಸಭಾ ಕಲಾಪದಲ್ಲಿ ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button