ಸುದ್ದಿ

ಪುತ್ತೂರು ಶೂಟೌಟ್- ಆರೋಪಿ ಹನೀಫ್ ಜೋಗಿ ಬಂಧನ….

ಪುತ್ತೂರು: ಕಬಕ ಸಮೀಪದ ಕೊಡಿಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನ.26ರ ಸಂಜೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಪ್ರಕರಣದ ಓರ್ವ ಆರೋಪಿ ಕೇಪು ಗ್ರಾಮದ ಕುಕ್ಕಿಗಟ್ಟು ನೀರ್ಕಾಜೆ ನಿವಾಸಿ ಹಸನ್ ಎಂಬವರ ಪುತ್ರ ಹನೀಫ್ ಜೋಗಿ (39) ಇವರನ್ನು ಗುಂಡ್ಯದ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಆರೋಪಿಯನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ಆದೇಶದಂತೆ 4 ತನಿಖಾ ತಂಡಗಳು ರಚನೆಯಾಗಿತ್ತು. ಪಶ್ಚಿಮ ವಲಯ ಐಜಿಪಿ ಯವರ ಖಚಿತ ಮಾಹಿತಿ ಮೇರೆಗೆ ದ.ಕ ಜಿಲ್ಲಾ ಎಸ್ ಪಿ ಮತ್ತು ಡಿ ವೈಎಸ್ ಪಿ ಮಾರ್ಗದರ್ಶನದಲ್ಲಿ ಪುತ್ತೂರು, ಉಪ್ಪಿನಂಗಡಿ ಡಿಸಿಐಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button