ತೆಕ್ಕಿಲ್ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ…

ಸುಳ್ಯ: ತೆಕ್ಕಿಲ್ ಮಾದರಿ ಸಮೂಹ ಶಿಕ್ಷಣ ಸಂಸ್ಥೆ‌ ಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಕೋವಿಡ್ ನಿಯಮಗಳನ್ನು ಅನುಸರಿಸಿ ಅತ್ಯಂತ ಸರಳ ಸಂಭ್ರಮಗಳಿಂದ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆಯವರು ಧ್ವಜಾರೋಹಣಗೈದು ಶುಭಹಾರೈಸಿದರು. ಶಿಕ್ಷಕರ ಪರವಾಗಿ ಸಹಶಿಕ್ಷಕ ಸಾದಿಕ್ ಎಸ್. ಎ. ಇವರು ಸ್ವಾತಂತ್ರ್ಯ ಆಚರಣೆಯ ಮಹತ್ವ ಹಾಗೂ ಪ್ರಸ್ತುತ ಅನಿವಾರ್ಯತೆಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಟಿ.ಎಂ.ಶಹೀದ್ ಅವರು ಅಧ್ಯಕ್ಷೀಯ ನೆಲೆಯಲ್ಲಿ ಸರ್ವಧರ್ಮಗಳ ಏಕತೆಗಳನ್ನು ಎತ್ತರಿಸುವ ಸ್ವಾತಂತ್ರ್ಯ ನಮ್ಮದಾಗಬೇಕು ಎಂದು ಸಾರಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಕೆ, ಸಹಶಿಕ್ಷಕರಾದ ಭವ್ಯ ಕೆ ಜೆ, ಸೌಮ್ಯ ಕೆ, ಲೋಕೇಶ್ವರಿ ಯು ಎಂ, ಉಷಾಲತಾ ಕೆ, ವ್ಯವಸ್ಥಾಪಕ ಶ್ರೀ ಸಿಯಾದ್ ಪಿ ಎ, ಹಿರಿಯ ವಿದ್ಯಾರ್ಥಿನಿ ನಂದಿತಾ ಪಿ ಕೆ, ಸ್ಥಳೀಯ ನಿವಾಸಿಗಳಾದ ಹನೀಫ್ ಮೊಟ್ಟೆಂಗಾರ್, ರಹೀಮ್ ಬೀಜದಕಟ್ಟೆ, ಜುನೈದ್ ಗೂನಡ್ಕ, ಸಫ್ವಾನ್ ಗೂನಡ್ಕ , ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ವಾಣಿ ಕೆ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಸೌಮ್ಯ ಕೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ವಿತರಿಸಲಾಯಿತು.

Sponsors

Related Articles

Back to top button