ಸುದ್ದಿ

ಪುತ್ತೂರು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ….

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ 19ನೇ ವಾರ್ಡ್ ಪರ್ಲಡ್ಕ ಪಾಂಗಳಾಯಿಯಲ್ಲಿ ಭಾನುವಾರ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ನಡೆಯಿತು.
ತನ್ನ ಜನ್ಮ ದಿನಾಚರಣೆಯನ್ನು ಪರಿಸರ ಸ್ವಚ್ಛತಾ ಕಾರ್ಯವನ್ನು ನಡೆಸುವ ಮೂಲಕ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಸ್ವಚ್ಚ ಹಿ ಸೇವಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿ ನಗರಸಭಾ ಸದಸ್ಯೆ ಹಾಗೂ ಪುತ್ತೂರು ನಗರ ಮಂಡಲ ಮಹಿಳಾ ಮೋರ್ಚ ಅಧ್ಯಕ್ಷೆ ವಿದ್ಯಾ ಆರ್. ಗೌರಿ ಅವರು ಪ್ರಧಾನಿಯವರ ಉದ್ದೇಶ ಮತ್ತು ಅವರ ಜೀವನದ ಆದರ್ಶ ಭಾರತೀಯರಾದ ನಮಗೆ ಜೀವನ ಮೌಲ್ಯಗಳ ಸಂದೇಶವಾಗಿದೆ. ಪ್ರಧಾನಿಯವರು ತಮ್ಮ ಹುಟ್ಟುಹಬ್ಬವನ್ನು ಯಾವುದೇ ರೀತಿಯ ವೆಚ್ಚ ಮಾಡದೆ ಅನಗತ್ಯ ಆಚರಣೆಗಳನ್ನು ನಡೆಸದೇ ಸ್ವಚ್ಛತಾ ಕಾರ್ಯದ ಮೂಲಕ ನಡೆಸುವಂತೆ ದೇಶವಾಸಿ ಜನರಿಗೆ ಕರೆ ನೀಡಿದ್ದರು. ಅವರ ಕರೆಗೆ ಸ್ಪಂಧಿಸಿ ನಾಗರಿಕರಾದ ನಾವೆಲ್ಲರೂ ನಮ್ಮ ಮನೆ ಹಾಗೂ ನಮ್ಮ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ನಿವೃತ್ತ ಪೊಲೀಸ್ ಎಎಸ್‍ಐ ಪರಮೇಶ್ವರ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರಸಭಾ ವಾರ್ಡ್‍ನ ಬೆಥನಿ ಶಾಲಾ ವಠಾರ, ವಿದ್ಯಾ ನಗರ, ಪಾಂಗಳಾಯಿ, ದರ್ಬೆ, ಆಫೀಸರ್ಸ್ ಕ್ಲಬ್ ವಠಾರದಲ್ಲಿ ನಾಲ್ಕು ತಾಸುಗಳ ಕಾಲ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ವೆಂಕಟರಮಣ ನಾಯಕ್ ಇಂದಾಜೆ, ಫ್ರ್ಯಾಂಕಿ ಲೋಬೋ, ಆನಂದ ಪೂಜಾರಿ, ಮಾಜಿ ನಗರಸಭಾಸದಸ್ಯ ವಿನಯ ಭಂಡಾರಿ, ಪ್ರವೀಣ್ ಭಂಡಾರಿ, ಶಿವ ಕುಮಾರ್, ನಿತ್ಯಾನಂದ, ವಾಸು ಪೂಜಾರಿ, ವೀಕ್ಷಿತ್, ಡಾ. ಮಂಜುನಾಥ್, ಗಣೇಶ್ ಬಿ.ಎಸ್., ಸುನಿಲ್, ಪ್ರೊ. ವಿಜಯ್ ಕುಮಾರ್ ಮೊಳೆಯಾರ, ಶ್ರೀನಿವಾಸ್, ಮಧುಸೂಧನ್ ಮಾಸ್ಟರ್, ಶಕೀಲ, ವಿಂದ್ಯಾ, ಸುಪ್ರೀತಾ, ಶಾರದಾ, ರಾಜಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button