ಸುದ್ದಿ

ಪುಲ್ವಾಮದಲ್ಲಿ ಮೃತಪಟ್ಟ ವೀರ ಸೇನಾನಿಗಳಿಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ನಿಂದ ನುಡಿ ನಮನ…

ಪೊನ್ನಂಪೇಟೆ :ಕಳೆದ ವರ್ಷ ಫೆ.14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳಿಂದ ಹತರಾದ 42 ವೀರ ಸೈನಿಕರಿಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಗೋಣಿಕೊಪ್ಪಲುವಿನ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮೀದೇರಿರ ನವೀನ್ ನವರ ಅಧ್ಯಕ್ಷತೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ವೀರ ಸೇನಾನಿ ಗಳ ಬಗ್ಗೆ ಮಾತನಾಡಿದರು. ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಈ ಸಂದರ್ಭ ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಉಸ್ಮಾನ್, ಕೊಡಗು ಡಿಸಿಸಿ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಬಾಪು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಶೀದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲಕೃಷ್ಣ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸೂರಜ್ ಹೊಸುರು ಪಕ್ಷದ ಮುಖಂಡರಾದ ಅಬ್ದುಲ್ ಜಲೀಲ್,ಅಂಕಿತ್ ಪೊನ್ನಪ್ಪ, ಪ್ರಮೋದ್ ಗಣಪತಿ, ಅಜಿತ್ ಅಯ್ಯಪ್ಪ,ಆಪಟೀರ ಟಾಟು ಮೊಣ್ಣಪ್ಪ,ಎ.ಜೆ.ಬಾಬು,ಗ್ರಾಮ ಪಂಚಾಯಿತಿ ಸದಸ್ಯರಾದ ಯಾಶ್ಮಿನ್,ನಜೀರ್, ಶಾಯೀನ್,ಸುಲೈಕಾ ರಾಜಶೇಖರ, ಪಕ್ಷದ ಕಾರ್ಯಕರ್ತರಾದ ಕರ್ಣರಾಜ್, ತಂಬಿ, ಶಾಜೀರ್, ಆಲೀರ ರಶೀದ್, ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published.

Back to top button