ಸುದ್ದಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ – ವಿಶ್ವ ಕಲ್ಯಾಣ ಮಹಾಸಂಕಲ್ಪ…

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸನ್ನಿಧಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು(ರಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶಯದಲ್ಲಿ ವಿಶ್ವ ಕಲ್ಯಾಣ ಮಹಾಸಂಕಲ್ಪದಲ್ಲಿ ಶ್ರೀ ವೇದಪಾರಾಯಣ, ಶ್ರೀ ಚಂಡಿಕಾ ಪಾರಾಯಣ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಸಾಮೂಹಿಕ ಅನುಷ್ಠಾನ ಜ. 30 ರಂದು ಸಂಪನ್ನಗೊಂಡಿತು.
ಬಂಟ್ವಾಳ ತಾಲೂಕು ಘಟಕದ ಪ್ರಮುಖರಾದ ವೇದಮೂರ್ತಿ ಪೊಳಲಿ ವೆಂಕಪ್ಪಯ್ಯ ಭಟ್, ವೇದಮೂರ್ತಿ ಕೆ ಕೃಷ್ಣರಾಜ ಭಟ್ ( ಜಿಲ್ಲಾಧ್ಯಕ್ಷರು ), ವೇದಮೂರ್ತಿ ಪೈಕ ವೆಂಕಟ್ರಮಣ ಭಟ್ ತಾಲೂಕು ಸಂಚಾಲಕರು, ಎಂ ಸುಬ್ರಹ್ಮಣ್ಯ ಭಟ್ ತಾಲೂಕು ಸಂಯೋಜಕರು, ಕೆ ವಾಸುದೇವ ಭಟ್ ತಾಲೂಕು ಖಜಾಂಚಿ ಮುರಳೀಧರ ಭಟ್ , ನಾಗರಾಜ ಭಟ್ ವಲಯ ಸಂಚಾಲಕರು ಮೊದಲಾದ ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಪೊಳಲಿ ಗಿರಿ ಪ್ರಕಾಶ್ ತಂತ್ರಿ ಭಾಗವಹಿಸಿದ್ದರು.

Advertisement

Related Articles

Back to top button