ಸುದ್ದಿ

ಬಂಟ್ವಾಳದ ಕಡೆಶಿವಾಲಯದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಘಟಕ ಆರಂಭ…

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯು ಕಡೆ ಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ದೇವಾಲದ ಆಡಳಿತ ಮೋಕ್ತೆಸರ ಶಾಂತಪ್ಪ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾದ ಗೌರವಾಧ್ಯಕ್ಷ ಪ್ರೊ. ಎ .ವಿ ನಾರಾಯಣ ಮಾತನಾಡಿ ಮೇ ತಿಂಗಳಲ್ಲಿ ಘಟಕದ ವತಿಯಿಂದ ಹಿರಿಯರ ಸಮಾವೇಶವನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಪ್ರತಿಷ್ಠಾನದ ಟ್ರಸ್ಟಿ ಪ್ರೊ. ರಾಜಮಣಿ ರಾಮಕುಂಜ ಪರಿಸರದಲ್ಲಾಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸತ್ಸಂಗವನ್ನು ನಡೆಸಿ ಕೊಟ್ಟರು.
ವೇದಿಕೆಯಲ್ಲಿ ತಿರುಮಲೇಶ್ವರ ಭಟ್ ಕಡೆಶಿವಾಲಯ, ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ವತ್ಸಲಾ ರಾಜ್ಞೆ, ಉದಯ ಶಂಕರ ರೈ, ರಾಮಕೃಷ್ಣ ನಾಯಕ್, ಧರ್ಣಪ್ಪ ಪೂಜಾರಿ ಚಂದ್ರಶೇಖರ್ ಆಳ್ವ ಪಡುಮಲೆ, ಕೃಷ್ಣ ಮಧೂರು,ಭವಾನಿ ಶಂಕರ ಶೆಟ್ಟಿ ಪುತ್ತೂರ ಉಪಸ್ಥಿತರಿದ್ದರು.

ಡಾ. ಬಿ.ಎನ್ ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿ ಪ್ರತಿಷ್ಠಾನದ ಸಹ ಸಂಚಾಲಕ ಭಾಸ್ಕರ್ ಬಾರ್ಯ ವಂದಿಸಿದರು.

Advertisement

Related Articles

Back to top button