ಶುಕ್ರವಾರ – ದ.ಕ 448 , ಉಡುಪಿ 174 ಹಾಗೂ ರಾಜ್ಯದಲ್ಲಿ 8960 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಶುಕ್ರವಾರ) ದ.ಕ ಜಿಲ್ಲೆಯಲ್ಲಿ ದಾಖಲೆಯ 448 , ಉಡುಪಿ 174 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 448 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11837 ಕ್ಕೆ ಏರಿಕೆಯಾಗಿದೆ.ಇಂದು 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 343 ಕ್ಕೆ ಏರಿಕೆಯಾಗಿದೆ. ಇಂದು 293 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2521 ಸಕ್ರಿಯ ಪ್ರಕರಣಗಳಿವೆ. 448 ಪ್ರಕರಣಗಳ ಪೈಕಿ 273 ಪ್ರಕರಣಗಳು ಮಂಗಳೂರಿನಿಂದ, 103 ಪ್ರಕರಣಗಳು ಬಂಟ್ವಾಳದಿಂದ, 27 ಪ್ರಕರಣಗಳು ಪುತ್ತೂರಿನಿಂದ, 17 ಪ್ರಕರಣಗಳು ಸುಳ್ಯದಿಂದ , 18 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 10 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 174 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11080ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2608 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು 8960 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,18,752ಕ್ಕೇರಿಕೆಯಾಗಿದೆ. ಇನ್ನು 3,18,752 ಪ್ರಕರಣಗಳ ಪೈಕಿ 2,27,019 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ಧಾರೆ. 86, 346 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 41 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 136 ಮಂದಿ ಸಾವನ್ನಪ್ಪಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಇಂದು 157 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

Sponsors

Related Articles

Leave a Reply

Your email address will not be published. Required fields are marked *

Back to top button