ಸುದ್ದಿ

ಬಂಟ್ವಾಳ ಬಿಜೆಪಿ ವತಿಯಿಂದ ಗ್ರಾಮವಿಕಾಸ ಯಾತ್ರೆ…

ಬಂಟ್ವಾಳ: ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಜ.14 ರಿಂದ ಜ.26 ರ ವರೆಗೆ ನಿರಂತರವಾಗಿ ನಡೆಯುವ ” ಗ್ರಾಮವಿಕಾಸ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ವಿನೂತನ ಚಿಂತನೆಯ ಪಾದಯಾತ್ರೆಯ 7 ನೇ ದಿನದಂದು ಜ. 20 ರಂದು ಶುಕ್ರವಾರ ಬಂಟ್ವಾಳ ಇತಿಹಾಸ ಪ್ರಸಿದ್ಧ ನೇತ್ರಾವತಿ ನದಿ ತಟದಲ್ಲಿರುವ ವಟಪುರ ಎಂದು ಪ್ರಸಿದ್ಧ ಪಡೆದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಹೊರಟಿತು.
ಜ.19 ರಂದು ಶಂಭೂರು ಸಮೀಪದ ನೀರಪಾದೆ ಎಂಬಲ್ಲಿ ಸಾರ್ವಜನಿಕ ಸಭೆ ನಡೆಸಿದ ಬಳಿಕ ಬಿ.ಕಸ್ಬಾ ಗ್ರಾಮದ ಜಕ್ರಿಬೆಟ್ಟು ಬಿಜೆಪಿ ಕಾರ್ಯಕರ್ತೆ ಮಲ್ಲಿಕಾ ಶೆಟ್ಟಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಬೆಳಿಗ್ಗೆ ಪ್ರಾತ:ಕಾಲದಲ್ಲಿ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಸಾವಿರಾರು ಕಾರ್ಯಕರ್ತರ ಜೊತೆ ಭೂಮಿ ತಾಯಿಗೆ ನಮಸ್ಕರಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಪಾದಯಾತ್ರೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿ.ಪಂ.ಮಾಜಿ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಪಾದಯಾತ್ರೆ ಸಂಚಾಲಕರಾದ ಮಾದವ ಮಾವೆ, ಸುದರ್ಶನ್ ಬಜ, ದೇವಸ್ಥಾನದ ಆಡಳಿತ ಮೊಕೇಸರ ಅಶೋಕ್ ಶೆಣೈ, ಟ್ರಸ್ಟಿ ಭಾಮಿ ನಾಗೇಂದ್ರ ನಾಥ್ ಶೆಣೈ, ಭಾಮಿ ನಾರಾಯಣ ಶೆಣೈ, ನಾಗೇಂದ್ರ ವಿ.ಬಾಳಿಗ, ಗಿರೀಶ್ ಪೈ ರವೀಂದ್ರ ಪ್ರಭು, ಗಿರಿಧರ್ ಬಾಳಿಗಾ, ಮಹೇಶ್ ಬಾಳಿಗ, ರಮಾನಾಥ ಪೈ, ರೇಖ ಪೈ, ಶಶಿಕಲಾ, ಮೀನಾಕ್ಷ ಗೌಡ, ಸುರೇಶ್ ಕುಲಾಲ್,
ಪ್ರಮುಖರಾದ ರಾಮ್ ದಾಸ ಬಂಟ್ವಾಳ, ಉದಯಕುಮಾರ್ ರಾವ್, ಪುರಸಭಾ ಸದಸ್ಯರುಗಳು, ಗ್ರಾಮಪಂಚಾಯತ್ ಅಧ್ಯಕ್ಷ ರುಗಳು, ಸದಸ್ಯರುಗಳು, ಕ್ಷೇತ್ರ ಸಮಿತಿ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು.

ಪಾದಯಾತ್ರೆಗೆ ಸಾಥ್ ನೀಡಿದ ಶಾಸಕ ವೇದವ್ಯಾಸ ಕಾಮತ್

ಏಳನೇ ದಿನದ ಪಾದಯಾತ್ರೆಯಲ್ಲಿ ಮಂಗಳೂರು ಶಾಸಕ‌ ವೇದವ್ಯಾಸ ಕಾಮತ್ ಅವರು ಶಾಸಕರ ಜೊತೆ ನಡಿಗೆಗೆ ಸಾಥ್ ನೀಡಿದರು.
‌‌ಮುಂಜಾನೆ ವೇಳೆ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಬಳಿಕ ಶಾಸಕರ ಜೊತೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಬಳಿಕ ಮಾತನಾಡಿದ ಅವರು ಅಪಾರ ಮಳೆಯಿಂದ ಹಾನಿ ಜೊತೆಗೆ ಕೊರೊನಾ ಸಂಕಷ್ಟದ ದಿನಗಳಲ್ಲಿ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ , ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ.ಇವರ ಸಾಧನೆಯನ್ನು ಹಾಗೂ ಕೇಂದ್ರ , ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ತೆರಳಿ ತಿಳಿಸುವ ಬಹಳ ದೊಡ್ಡ ಕೆಲಸ ಶಾಸಕ ರಾಜೇಶ್ ‌ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ನಡೆಯುವ ಕಾರ್ಯ ಅತ್ಯಂತ ಉತ್ತಮ ಕಾರ್ಯವಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸಹಿತ ಅನೇಕ ಸಮಾಜಘಾತುಕ ಘಟನೆಗಳಿಗೆ ಬೆಂಬಲ ನೀಡಿದ ,ಕಾಂಗ್ರೇಸ್ ನ ನಿಲುವು ಈ ದೇಶಕ್ಕೆ ಮಾರಕವಾಗಿದೆ. ಹಾಗಾಗಿ ಈ ದೇಶದ ನೆಲ, ಜಲ, ಸಂಸ್ಕೃತಿ ರಕ್ಷಣೆಗಾಗಿ ಬಿಜೆಪಿ ಆಡಳಿತ ಬೇಕಾಗಿದೆ.ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯ ಅಭಿವೃದ್ಧಿ , ನವ ಬಂಟ್ವಾಳಕ್ಕೆ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಆಯ್ಕೆಯಾಗಬೇಕಾಗಿದೆ.
ಅ ನಿಟ್ಟಿನಲ್ಲಿ ಕಾರ್ಯರ್ತರು ವಿರಮಿಸದೆ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು. 13 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 30 ಕಿ.ಮೀ ಗಿಂತಲೂ ಅಧಿಕವಾಗಿ ಪಾದಯಾತ್ರೆ ಮ‌ೂಲಕ ಜನರ ಮನೆ,ಮನ ಮುಟ್ಟುವ ಕಾರ್ಯ ಶಾಸಕರು ಮಾಡುತ್ತಿದ್ದು, ಉತ್ತಮ ಜನಬೆಂಬಲ ದೊರಕಿದೆ, ಗ್ರಾಮವಿಕಾಸ ಯಾತ್ರೆ ಯಶಸ್ವಿಯಾಗಲಿ ಎಂದು ‌ಹಾರೈಸಿದರು.

ಹಾರಕ್ಕೆ ಬಾಗಿದರು, ಮಕ್ಕಳ ಸ್ನೇಹಿ ಶಾಸಕ ಹೆಗ್ಗಳಿಕೆಗೆ ಪಾತ್ರ

ಮಗು ಹಾರ ಹಾಕುವಾಗ ಮಗುವಿನಂತೆ ಬಾಗಿ ಕುಳಿತುಕೊಂಡು ಹಾರ ಹಾಕಿಸಿಕೊಂಡ ದೃಶ್ಯ ಸೇರಿದ ಸಾವಿರಾರು ಕಾರ್ಯಕರ್ತರಿಗೆ ಆಶ್ಚರ್ಯ ಮೂಡಿಸಿದೆ. ಸೇರಿದ್ದ ಶಾಸಕರ ನಡೆಯನ್ನು ಕೊಂಡಾಡಿದ್ದಲ್ಲದೆ ಶಾಸಕರಿಗೆ ಜೈಕಾರ ಕೂಗಿದ್ದಾರೆ. ದಾರಿಯುದ್ದಕ್ಕೂ ಪಾದಯಾತ್ರೆ ಸಂದರ್ಭದಲ್ಲಿ ಶಾಸಕರು ಸಿಕ್ಕಿದ ಮಕ್ಕಳಿಗೆ ತಿಂಡಿತಿನಸುಗಳನ್ನು ನೀದರು. ಮಕ್ಕಳನ್ನು ಎತ್ತಿ ಮುದ್ದಾಡಿದ ಕ್ಷಣ ಅನೇಕ. ಹೀಗೆ ಪಾದಯಾತ್ರೆಯಲ್ಲಿ ನಡಿಗೆ ಜೊತೆ ಜನರ ಮನಸ್ಸು ಗೆಲ್ಲುವ ಅನೇಕ ಸಂಗತಿಗಳಿಗೆ “ವಿಕಾಸ ಯಾತ್ರೆ” ಸಾಕ್ಷಿಯಾಗಿವೆ.
ಕಾಲು ಮುಟ್ಟಿ ನಮಸ್ಕಾರ
ಪಾದಯಾತ್ರೆಯ ಸಂದರ್ಭದಲ್ಲಿ ಶಾಸಕರಿಗಾಗಿ ಕಾದು ಕುಳಿತು ಹಾರ ಹಾಕಿ ಗೌರವಿಸಿದ ಹಿರಿಯರಿಗೆ ಗೌರವ ನೀಡುವ ಶಾಸಕರು ಇಂದು ಬಂಟ್ವಾಳ ಪೇಟೆಯಲ್ಲಿ ಸಾಗುವ ವೇಳೆ ಶಾಸಕರಿಗಾಗಿ ಕಾದು ಕುಳಿತಿದ್ದ ಭದ್ರ ಗ್ಯಾಸ್ ಮಾಲಕರಾದ ವರದ ಆಚಾರ್ಯ (74 ವ) ಅವರ ಕಾಲು‌ ಮುಟ್ಟಿ ‌ನಮಸ್ಕಾರ ಮಾಡಿ ಮುಂದೆ ಸಾಗಿದರು.
ಪಾದಯಾತ್ರೆ ಸಂದರ್ಭದಲ್ಲಿ ಆರತಿ ಎತ್ತಿ ಹಣೆಗೆ ಕುಂಕುಮ ಹಚ್ಚಿ ಸ್ವಾಗತಿಸುವ ಮಹಿಳೆಯರಿಗೆ ಕೈ ಮುಗಿದು ಗೌರವ ನೀಡುವ ಶಾಸಕರು ಅ ಬಳಿಕ ಭೂಮಿಯನ್ನು ಮುಟ್ಟಿ ನಮಸಿಯೇ ಮುಂದೆ ಪಾದಯಾತ್ರೆಗೆ ಹೆಜ್ಜೆ ಹಾಕುವುದು ವಿಶೇಷವಾಗಿದೆ.

img 20230120 wa0022
img 20230120 wa0021
Advertisement

Related Articles

Back to top button