Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135
ಬಡಗಬೆಳ್ಳೂರು- 2 ಕೋಟಿ ಮಿಕ್ಕಿದ ವಿವಿಧ ಕಾಮಗಾರಿಗಳಿಗೆ ಚಾಲನೆ.... - VarthaLoka
ಸುದ್ದಿ

ಬಡಗಬೆಳ್ಳೂರು- 2 ಕೋಟಿ ಮಿಕ್ಕಿದ ವಿವಿಧ ಕಾಮಗಾರಿಗಳಿಗೆ ಚಾಲನೆ….

ಬಂಟ್ವಾಳ: ಬಡಗಬೆಳ್ಳೂರು ಗ್ರಾಮ ಪಂಚಾಯತ್‍ನ ಬಡಗಬೆಳ್ಳೂರು ತೆಂಕಬೆಳ್ಳೂರು ಗ್ರಾಮದಲ್ಲಿ ಸುಮಾರು 2 ಕೋಟಿ 10 ಲಕ್ಷದ ವಿವಿಧ ಕಾಮಗಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಚಾಲನೆ ನೀಡಿದರು.
ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಾಗುಡ್ಡೆಯವರೆಗಿನ ಸುಮಾರು 1.50 ಕೋಟಿ ರಸ್ತೆ ಅಭಿವೃಧ್ಧಿಗೆ ಗುದ್ದಲಿ ಪೂಜೆ ನೆರೆವೇರಿಸಿದರು. ನಂತರ ಶಾಸಕರು ಮಾತನಾಡುತ್ತಾ ಮುಂದಿನ ಮೂರು ವರ್ಷದ ಶಾಸಕನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃಧ್ಧಿ ದೃಪ್ಠಿಯಲ್ಲಿ ಕೆಲಸ ಮಾಡುವತ್ತ ಗಮನ ಹರಿಸಿದ್ದು ರಾಜ್ಯದಲ್ಲಿ ಬಂಟ್ವಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದರು.
ಗುದ್ದಲಿ ಪೂಜೆ ನೇರೆವೇರಿಸಿದ ಕಾಮಗಾರಿಗಳು:
ಬಡಗಬೆಳ್ಳೂರು ಗ್ರಾಮದ ಈ ಕೆಳಗಿನ ಕಾಮಗಾರಿಗಳಾದ
1.ದೂಪೆಮಾರು ರಸ್ತೆಗೆ 15 ಲಕ್ಷ
2.ನೆಲ್ಲಿಮಾರು ರಸ್ತೆಗೆ 10 ಲಕ್ಷ
3.ಅಂಬೋಡಿ ಮಾರು ರಸ್ತೆಗೆ 10 ಲಕ್ಷ
4.ಬಟ್ಟಾಜೆ ರಸ್ತೆಗೆ 5 ಲಕ್ಷ
5.ತೆಂಕಬೆಳ್ಳೂರು ಗ್ರಾಮ ಕಮ್ಮಾಜೆ ರಸ್ತೆ 20 ಲಕ್ಷ
ಬಡಗಬೆಳ್ಳೂರು ಗ್ರಾಮದ ಗುಡ್ಡೆ ಅಂಗಡಿ ಕೋಡಿಮಜಲು ರಸ್ತೆ 10 ಲಕ್ಷ, ಶಾಲಾಬಳಿ ಕೇಪುಲ್ದಡ್ಕ ರಸ್ತೆ 5 ಲಕ್ಷ, ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ 2 ರಸ್ತೆಗಳಿಗೆ 10 ಲಕ್ಷ ಈ ಕಾಮಗಾರಿಗಳನ್ನು ಶಾಸಕರು ಉದ್ಛಾಟಿಸಿದರು. ಶಾಸಕರೊಂದಿಗೆ ಕ್ಷೇತ್ರದ ಉಪಾಧ್ಯಾಕ್ಷರಾದ ದೇವಪ್ಪ ಪೂಜಾರಿ,ತಾ.ಪಂ ಸದಸ್ಯರು ಯಶವಂತ ಪೂಳಲಿ, ರಮೇಶ್ ಪೂಜಾರಿ ಬಟ್ಟಾಜೆ, ಪ್ರಕಾಶ್‍ಆಳ್ವ, ಉಮೇಶ್ ಶೆಟ್ಟಿ ಪರಿಮೊಗರು, ನಂದರಾಮ ರೈ, ರತ್ನಕರ ಕೋಟ್ಯಾನ್, ತಿರುಲೇಶ್,ಪ್ರಕಾಶ್ ಬೆಳ್ಳೂರು, ಉಸ್ಮನ್ ಡಿ, ರಘವೀರ ಆಚಾರ್ಯ, ವಿಠಲ ಬೆಳ್ಳೂರು, ಸವಿತಾ ಶೆಟ್ಟಿ, ವೀಣಾ ಭಟ್, ಜಯರಾಮ್ ಶೆಟ್ಟಿ, ಪ್ರಮೋದ್ ಕಮ್ಮಾಜೆ, ಗಂಗಾಧರ್ ರೈ, ನಿರಂಜನ್ ಭಂಡಾರಿ, ಚಿದಾನಂದ ಬಟ್ಟಾಜೆ, ಮೋಹನದಾಸ್ ಕೊಟ್ಟಾರಿ, ಸಾಕೇತ್ ಶೆಟ್ಟಿ, ಹರೀಶ್ ಹೆಗ್ಡೆ, ಸಂತೋಷ್ ಪೂಂಜ, ಯೋಗೀಶ್, ಗಣೇಶ್, ರಮೇಶ್, ಶ್ರೀನಿವಾಸ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು ವಿವಿಧ ಇಲಾಖಾಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button