ಸುದ್ದಿ

ಬಾಬರಿ ಮಸೀದಿ, ರಾಮ ಮಂದಿರ ಅಂತಿಮ ತೀರ್ಪು- ಶಾಂತಿ ಕಾಪಾಡಲು ಟಿ.ಎಂ.ಶಹೀದ್ ಮನವಿ…

ಸುಳ್ಯ: ಸುಪ್ರೀಂಕೋರ್ಟಿನಲ್ಲಿ ಬಾಬರಿ ಮಸೀದಿ ಮತ್ತು ರಾಮ ಜನ್ಮ ಭೂಮಿ ವಿವಾದದ ಅಂತಿಮ ತೀರ್ಪು ನಾಳೆ ಹೊರಬೀಳಲಿದ್ದು, ಸಾರ್ವಜನಿಕರು ತೀರ್ಪಿನ ಪರ ಅಥವಾ ವಿರುದ್ಧ ಹೇಳಿಕೆಗಳನ್ನು ನೀಡಬಾರದು, ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕೆಂದು ಕೊಡಗು ಜಿಲ್ಲಾ ಕೆಪಿಸಿಸಿ ವೀಕ್ಷಕ ಟಿ.ಎಂ.ಶಹೀದ್ ತೆಕ್ಕಿಲ್ ಮನವಿ ಮಾಡಿದ್ದಾರೆ.
1992 ಡಿಸೆಂಬರ್ 6 ರ ನಂತರ ಸಂಭವಿಸಿದ ಅನೇಕ ಘಟನೆಗಳು ಪುನರಾವರ್ತನೆ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಮತ್ತು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕರಾಳ ಅಥವಾ ವಿಜಯೋತ್ಸವ ಆಚರಿಸಬಾರದೆಂದು ಟಿ.ಎಂ.ಶಹೀದ್ ವಿನಂತಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button