ಸುದ್ದಿ

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ-SSLC ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ…

ಬಂಟ್ವಾಳ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಪ್ರಹ್ಲಾದ್ ಜೆ. ಶೆಟ್ಟಿ ಮಾತನಾಡಿ “ನಮ್ಮ ಸಂಸ್ಥೆಯಲ್ಲಿ ಪಠ್ಯ ಮಾತ್ರವಲ್ಲದೆ ಪಠ್ಯೇತರ ಅವಕಾಶಗಳು ವಿಫುಲವಾಗಿವೆ. ಈ ಅವಕಾಶಗಳನ್ನು ನಿಮ್ಮ ಶೈಕ್ಷಣಿಕ ಉನ್ನತಿಗಾಗಿ ಬಳಸಿಕೊಳ್ಳಿ. ಉತ್ತಮ ಫಲಿತಾಂಶ ಪಡೆಯುವ ಮೂಲಕ ಉಜ್ವಲ ಬದುಕಿಗೆ ಮುನ್ನುಡಿ ಬರೆಯಿರಿ “ ಎಂದರು.
ಆಡಳಿತಾಧಿಕಾರಿ ಸಿ. ಶ್ರೀಧರ್ ಮಾತನಾಡಿ “ಪ್ರಜ್ಞಾವಂತ ವಿದ್ಯಾರ್ಥಿಗಳಾದ ನೀವು ವಿದ್ಯಾಸಂಸ್ಥೆಯಲ್ಲಿ ದೊರೆತ ಭದ್ರ ಬುನಾದಿಯ ಮೇಲೆ ಉಜ್ವಲ ಭವಿಷ್ಯದ ಸೌಧವನ್ನು ನಿರ್ಮಿಸಿಕೊಳ್ಳಿ. ವಯೋಸಹಜ ಚಾಂಚಲ್ಯವನ್ನು ಹತೋಟಿಯಲ್ಲಿಟ್ಟು ಸಾಧನೆಯತ್ತ ಗಮನಹರಿಸಿ” ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಶಿಕ್ಷಕ ರಕ್ಷಕ ಸಂಘದ ನಿಯೋಜಿತ ಅಧ್ಯಕ್ಷರಾದ ಪಿ.ಎಸ್. ಮೋಹನ್ ಮಾತನಾಡಿ ‘ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಸದಾಕಾಲ ಸ್ಮರಣೆಯಲ್ಲಿಡಿ. ಸಾಧನೆಯ ಮೂಲಕ ಮನೆಮಾತಾಗಿ ಹಾಗೂ ಸಮಾಜಕ್ಕೆ ಮಾದರಿಯಾಗಿ “ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಬಿ.ಎಸ್ ನ್ಯಾಕ್ , ಉಪಾಧ್ಯಕ್ಷರಾದ ಅಪ್ರಾಯ ಪೈ, ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ , ಟ್ರಸ್ಟಿ ರೊ| ಪುಷ್ಪರಾಜ ಹೆಗ್ಡೆ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ. ಸಲ್ಡಾನಾ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮೇಘ, ದೀಪ್ತಿ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕಾ ಸ್ವಾಗತಿಸಿ, ಮೋಕ್ಷ ವಂದಿಸಿದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button