ಬೆಂಗಳೂರು ಶ್ರೀಗೋವರ್ಧನಗಿರಿ ಗುಹಾಲಯ ಕ್ಷೇತ್ರದಲ್ಲಿ ಪೂರ್ಣಮಂಡಲ ರಂಗಪೂಜೆ…
ಬೆಂಗಳೂರು:ಶ್ರೀಗೋವರ್ಧನಗಿರಿ ಗುಹಾಲಯ ಕ್ಷೇತ್ರ – ಉಡುಪಿ ಶ್ರೀ ಪುತ್ತಿಗೆ ಮಠದ ಆಶ್ರಯ ದಲ್ಲಿ ಏ.22 ರಿಂದ ಮೇ 3ರ ವರೆಗೆ ನಡೆದ ಆನ್ ಲೈನ್ ಭಗವದ್ಗೀತಾ ತರಗತಿ,ವೇದಪಾಠ, ಸಂಧ್ಯಾವಂದನೆ ತರಬೇತಿ, ಸಮಗ್ರ ಕುಟುಂಬಕ್ಕೆ ಸಮಗ್ರ ಬೇಸಿಗೆ ಶಿಬಿರ (ವಸಂತ ಬೇಸಿಗೆ ಶಿಬಿರ)ದ ಸಂದರ್ಭದಲ್ಲಿ ಶ್ರೀಗೋಪಾಲಕೃಷ್ಣನಿಗೆ ಪೂರ್ಣಮಂಡಲ ರಂಗಪೂಜೆಯನ್ನು ನೆರೆವೇರಿಸಲಾಯಿತು.
ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪಾಡಿಗಾರು ಶ್ರೀ ಪುತ್ತಿಗೆ ಮಠದ ವಿದ್ಯಾಪೀಠದಿಂದ ಶಿಬಿರಾರ್ಥಿಗಳಿಗೆ ಆನ್ಲೈನ್ ಮೂಲಕವೇ ಕ್ಲೇಶನಾಶನ ಶ್ರೀಕೃಷ್ಣ ಮಂತ್ರ ಉಪದೇಶವಿತ್ತು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀ ದೇವರ ಆನ್ಲೈನ್ ಸೇವೆಗಳ ವ್ಯವಸ್ಥೆಯನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು.
ಸೇವಾದಾರರಾದ ಮಂಜುನಾಥ್ ಜನ್ನು ಕುಟುಂಬಸ್ತರು ಯಲ್ಲಾಪುರದ ತಮ್ಮ ಮನೆಯಲ್ಲಿದ್ದುಕೊಂಡೇ ಸೇವಾ ಸಂಕಲ್ಪ ಮಾಡಿಸಿಕೊಂಡರು. ಕುಂದಾಪುರದ ಶ್ರೀ ಪ್ರಕಾಶ್ ಶೆಟ್ಟಿ ಕುಟುಂಬಿಕರು ಮತ್ತು ಎಲ್.ಎಸ್.ವಿಶ್ಬನಾಥ ಪರಿವಾರದವರು ಬೆಂಗಳೂರಿನಿಂದ ಸೇವೆಯಲ್ಲಿ ಪಾಲ್ಗೊಂಡರು.
ಸಹಸ್ರಾರು ಶಿಬಿರಾರ್ಥಿಗಳು, ಅಸಂಖ್ಯ ಭಕ್ತರು ಆನ್ಲೈನ್ ನಲ್ಲಿ ಪೂಜಾ ಕೈಂಕರ್ಯವನ್ನು ವೀಕ್ಷಿಸಿದರು.ಶ್ರೀಗೋವರ್ಧನಗಿರಿ ಗುಹಾಲಯ ಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ವಾನ್ ರಮಣಾಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಾವು ಎರಡನೇ ದಿನದಿಂದ ಕಡೆಯ ದಿನದವರೆಗೂ ಶಿಬಿರದಲ್ಲಿ ಪಾಲ್ಗೊಂಡು ಪಾವನರಾದೆವು.
ಕಡೆಯ ದಿನದವರೆಗೂ ಬಹಳಷ್ಟು ಆಧ್ಯಾತ್ಮಿಕ ವಿಷಯಗಳನ್ನು, ವಿವಿಧ ಕಲೆಗಳು, ಶ್ಲೋಕಗಳು ಹೀಗೆ ಹತ್ತು ಹಲವಾರು ಅತ್ಯಂತ ಕುತೂಹಲಕಾರಿ ಉಪಯುಕ್ತ ವಿಷಯಗಳನ್ನು ತಿಳಿದು ಪುನೀತರಾದೆವು.
ಈ ಅತ್ಯಂತ ಕಡಿಮೆ ಸಮಯಾವಧಿಯಲ್ಲಿ ಒಂದು ಕ್ಷಣ ವನ್ನೂ ವ್ಯರ್ಥವಾಗದ ಹಾಗೆ ಶ್ರೀಗಳು ಮತ್ತು ಶಿಷ್ಯವೃಂದ ಕಾರ್ಯಕ್ರಮ ನಡೆಸಿದ ರೀತಿಗೆ ಯಾರಾದರೂ ಮೆಚ್ಚಲೇ ಬೇಕು. ಶಿಬಿರದಲ್ಲಿ ಪ್ರತಿದಿನದ ದೇವರ ದರ್ಶನ, ಹಾಗೂ ಶ್ರೀಗಳ ಆಶೀರ್ವಚನ, ಪೂಜೆಯ ದರ್ಶನ ಭಾಗ್ಯ ಇವೆಲ್ಲವೂ ಕಾರ್ಯಕ್ರಮಗಳ ಹೈಲೈಟ್ಸ್.
ಆದರೆ ನಾನು, ನನ್ನ ಮನೆಯಲ್ಲಿ Wi-Fi ಇಲ್ಲದ ಕಾರಣ data plan ನಲ್ಲಿಯೇ ಮಧ್ಯೆ ಮಧ್ಯೆ ಅಡಚಣೆ ಯಲ್ಲಿಯೇ ಭಾಗವಹಿಸ ಬೇಕಾಯಿತು.
ಇಂತಹ ಅತ್ಯಪೂರ್ವ ಶಿಬಿರದಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟ ಶ್ರೀಗಳವರಿಗೂ ಮತ್ತು ಶಿಷ್ಯ ವೃಂದಕ್ಕೂ ಪ್ರಣಾಮಗಳನ್ನು ಅರ್ಪಿಸುತ್ತಾ ಇದೇರೀತಿ ತಮ್ಮಿಂದ ಮುಂದೆಯೂ ಸಮಾಜಕ್ಕೆ ಬಹಳಷ್ಟು ಆಧ್ಯಾತ್ಮಿಕ ವಿಷಯಗಳನ್ನು ಕೊಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ