ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – 8 ಪ್ರಾಜೆಕ್ಟ್ ಗಳು KSCST ಯಿಂದ ಪ್ರಾಯೋಜಕತ್ವಕ್ಕಾಗಿ ಅನುಮೋದನೆ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಅಂತಿಮ ವರ್ಷದ ಬಿ.ಇ ವಿದ್ಯಾರ್ಥಿಗಳ 8 ಪ್ರಾಜೆಕ್ಟ್ ಗಳ ಪ್ರಸ್ತಾಪಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST ) ಯಿಂದ ಪ್ರಾಯೋಜಕತ್ವಕ್ಕಾಗಿ ಅನುಮೋದನೆಗೊಂಡಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 1 ಪ್ರಾಜೆಕ್ಟ್ , ಮಾಹಿತಿ ತಂತ್ರಜ್ಞಾನ ವಿಭಾಗದ 2 ಪ್ರಾಜೆಕ್ಟ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ 1 ಪ್ರಾಜೆಕ್ಟ್ , ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 2 ಪ್ರಾಜೆಕ್ಟ್ ಗಳು ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ 2 ಪ್ರಾಜೆಕ್ಟ್ ಗಳು ಪ್ರಾಯೋಜಕತ್ವಕ್ಕಾಗಿ ಅನುಮೋದನೆಗೊಂಡಿದೆ.
ಈ ಎಲ್ಲಾ ಪ್ರಾಜೆಕ್ಟ್ ಗಳನ್ನು ಅಭಿವೃದ್ಧಿಪಡಿಸಲಿರುವ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡುತ್ತಿರುವ ಉಪನ್ಯಾಸಕರನ್ನು ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮತ್ತು ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಅವರು ಅಭಿನಂದಿಸಿದ್ದಾರೆ.

Sponsors

Related Articles

Back to top button