ಸುದ್ದಿ

ಭಟ್ಕಳ- ಒಂದೇ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು…

ಭಟ್ಕಳ: ಉತ್ತರ ಕನ್ನಡದ ಭಟ್ಕಳದಲ್ಲಿ ಇಂದು ಒಂದೇ ದಿನ 12 ಮಂದಿಯ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಆಗಿದೆ.

ಮೇ.5 ರಂದು 18 ವರ್ಷದ ಯುವತಿಗೆ ಕಾಣಿಸಿಕೊಂಡ ಕೊರೋನಾ ಇದೀಗ ಆಕೆಯ ಅಕ್ಕ, ಅಜ್ಜ, ಅಜ್ಜಿ, ಚಿಕ್ಕಮ್ಮ , ಇಬ್ಬರು ಗೆಳತಿಯರು ಸೇರಿದಂತೆ ಒಟ್ಟು ಇಬ್ಬರು ಪುರುಷರು, ಒಂಬತ್ತು ಮಹಿಳೆಯರು ಹಾಗೂ ಒಂದು ಮಗುವಿನಲ್ಲೂ ಕಾಣಿಸಿಕೊಂಡಿದೆ.
ಭಟ್ಕಳದ ಓರ್ವ ಮಹಿಳೆ ತನ್ನ 5 ತಿಂಗಳ ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದು ಆಕೆಯೊಂದಿಗೆ ಪತಿ ಮತ್ತು ತಂಗಿಯು ಜತೆಯಲ್ಲಿ ಹೋಗಿದ್ದು, ಅಲ್ಲಿಂದ ಮರಳಿ ಭಟ್ಕಳಕ್ಕೆ ಬಂದ ಕೆಲವು ದಿನಗಳ ನಂತರ ಅಂದರೆ ಮೇ.1ರಂದು ತನ್ನ ತಂಗಿಗೆ ಆರೋಗ್ಯ ಸರಿಯಿಲ್ಲ ಎಂದು ಭಟ್ಕಳ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ರವಾನಿಸಿದ ವೈದ್ಯರಿಗೆ ಮೇ 5 ರಂದು ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ನಂತರ ಆಕೆಯ ಕುಟುಂಬದ ಎಲ್ಲ ಸದಸ್ಯರನ್ನು ಕೊರೆಂಟೈನ್ ಮಾಡಿ ಎಲ್ಲರ ಗಂಟಲು ದ್ರವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇಂದು ಆಕೆಯ ಕುಟುಂಬದ 12 ಮಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಆ ಮೂಲಕ ಇದೀಗ ಹೊರ ಜಿಲ್ಲೆಗೂ ಕೊರೊನಾ ಹರಡುವುದಕ್ಕೆ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಕಾರಣವಾಗಿದೆ ಎನ್ನಲಾಗಿದೆ.

Related Articles

Leave a Reply

Your email address will not be published.

Back to top button