ಸುದ್ದಿ
ಮಂಗಳೂರಿನಲ್ಲಿ ಗಗನಯಾತ್ರಿ-ವೀಡಿಯೊ ವೈರಲ್…….
ಮಂಗಳೂರು: ಮಂಗಳೂರಿನ ರಸ್ತೆಯಲ್ಲಿ ನಡೆದಾಡುವ ಗಗನಯಾತ್ರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಹೋರಾಟಗಾರ ಅಜೆಯ್ ಡಿಸೋಜಾ ಪುತ್ರಿ ಆರನೇ ತರಗತಿಯಲ್ಲಿ ಓದುತ್ತಿರುವ ಅಡ್ಲಿನ್ ಡಿಸೋಜಾ ಹೀಗೆ ಗಗನಯಾತ್ರಿಯ ಉಡುಗೆ ತೊಟ್ಟು ರಸ್ತೆ ದುರಸ್ಥಿ ಮಾಡಿಕೊಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಹದಗೆಟ್ಟಿದ್ದು ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ಥಿ ಕಾರ್ಯವನ್ನು ಮಾಡುತ್ತಿಲ್ಲ. ಹದಗೆಟ್ಟ ಹೈವೇ ರಸ್ತೆಯಿಂದ ಜನರು ಹಾಗೂ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತ ಗಮನಹರಿಸಿ ರಸ್ತೆ ದುರಸ್ಥಿ ಮಾಡಲಿ ಎಂಬುವುದು ಈ ವಿಶಿಷ್ಠ ಪ್ರತಿಭಟನೆಯ ಆಶಯ.
Advertisement