ಸುದ್ದಿ

ಮಂಗಳೂರು – ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ….

ಮಂಗಳೂರು : ದಿನವಿಡಿ ಸಡಿಲಿಕೆಯಿದ್ದ ಕರ್ಫ್ಯೂ ನಗರದಲ್ಲಿ ಮತ್ತೆ ಮುಂದುವರೆದಿದೆ. ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಗ್ಗೆಯ ತನಕ ಮಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಇಂದು ನಗರದ ಜನ ಬೆಳಗ್ಗಿನಿಂದಲೇ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂಗಡಿ ಮುಂಗಟ್ಟುಗಳು, ಹೋಟೇಲ್ ಗಳು ಎಂದಿನಂತೆ ತೆರೆದಿದ್ದವು.
ಸಂಜೆ ಆರು ಗಂಟೆಯಾಗುತ್ತಿದ್ದಂತೆ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ದಿನವಿಡಿ ತೆರೆದಿದ್ದ ಅಂಗಡಿಗಳು, ಮಳಿಗೆಗಳನ್ನು ಸಂಜೆ ಆರು ಗಂಟೆಯಾಗುತ್ತಿದ್ದಂತೆ ವ್ಯಾಪಾರಿಗಳು ಬಂದ್ ಮಾಡಿದರು. ಹಾಗೂ ಕೆಲವೆಡೆ ಪೊಲೀಸರು ಬಂದ್ ಮಾಡುವಂತೆ ಸೂಚನೆ ನೀಡಿದರು.ಸಂಜೆ ಆರು ಗಂಟೆಯ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಜನ ಸಂಚಾರ, ವಾಹನಗಳ ಸಂಚಾರ ವಿರಳಗೊಂಡಿದೆ. ನಗರದಲ್ಲಿ ಜನರ ಓಡಾಟವಿಲ್ಲದೆ ಸ್ತಬ್ದಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button