Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಶಂಕಿತ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣು.... - VarthaLoka
ಸುದ್ದಿ

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಶಂಕಿತ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣು….

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ.
ನಗರದ ಡಿಜಿ & ಐಜಿಪಿ ಕಚೇರಿಗೆ ಬಂದು ಡಿಜಿಐಜಿ ನೀಲಮಣಿರಾಜು ಅವರ ಮುಂದೆ ಉಡುಪಿ ಮೂಲದ ಆದಿತ್ಯರಾವ್ ಶರಣಾಗಿದ್ದಾನೆ.​ಮಂಗಳವಾರ ರಾತ್ರಿ ಶರಣಾಗಿರುವ ಆರೋಪಿಯನ್ನು ಡಿಜಿ ಕಚೇರಿ ಸಿಬ್ಬಂದಿ ಹಲಸೂರು ಗೇಟ್​ ಪೊಲೀಸ್​ ಠಾಣೆ ವಶಕ್ಕೆ ನೀಡಲಾಗಿದ್ದು, ರಾತ್ರಿ ಆರೋಪಿಯ ವಿಚಾರಣೆ ನಡೆಸಲಾಗಿದೆ. ಈ ವೇಳೆ ಬಾಂಬ್​ ಇಟ್ಟಿದ್ದು ನಾನೇ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.ಸದ್ಯ ವಶಕ್ಕೆ ಪಡೆದಿರುವ ಹಲಸೂರು ಗೇಟ್​ ಪೊಲೀಸರು ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಸೋಮವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್​ ಪತ್ತೆಯಾಗಿತ್ತು. ತದನಂತರ ಪರಿಶೀಲನೆ ನಡೆಸಿದಾಗ ಸಜೀವ್​ ಬಾಂಬ್​ ಇರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿ, ಬಾಂಬ್​ ನಿಷ್ಟ್ರಿಯ ದಳ ಬಾಂಬ್​ ಅನ್ನು ಕೆಂಜಾರು ಮೈದಾನ ಕಡೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಸಂಜೆ ವೇಳಿ ಸ್ಫೋಟಿಸಿ, ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿತು.

Related Articles

Leave a Reply

Your email address will not be published. Required fields are marked *

Back to top button