ಸುದ್ದಿ

ಮಾತೃವಿಯೋಗ – ಕೆ.ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ಟಿ .ಎಂ. ಶಾಹಿದ್ ಭೇಟಿ…

ಬೆಂಗಳೂರು: ಇತೀಚೆಗಷ್ಟೇ ಮಾತೃವಿಯೋಗ ಹೊಂದಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಕೇರಳದ ಕಣ್ಣನ್ನೂರಿನ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹ್ಮದ್ ಜೊತೆಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ . ಎಂ. ಶಾಹಿದ್ ಭೇಟಿ ನೀಡಿದರು.
ಕೆ.ಸಿ. ವೇಣುಗೋಪಾಲ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಈ ನಷ್ಟವನ್ನು ಭರಿಸಲು ದೇವರು ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button