ಸುದ್ದಿ

ಮುಕ್ಕ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನ…..

ಸುರತ್ಕಲ್: ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಿವಿಲ್ ಇಂಜಿಯರಿಂಗ್ ವಿಭಾಗವು ‘ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಪ್ರಚಲಿತ ವಿದ್ಯಮಾನಗಳು ಮತ್ತು ಬೆಳವಣಿಗೆ’ ಕುರಿತು ರಾಷ್ಟ್ರ ಮಟ್ಟದ ತಾಂತ್ರಿಕ ಸಮ್ಮೇಳನವನ್ನು ಆಯೋಜಿಸಿತು.
ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಜಂಟಿ ನಿರ್ದೇಶಕರಾದ ಡಾ. ಬಿ ಹೆಚ್ ವಿ ಪೈ ಯವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ,ವೇಗವಾಗಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಜ್ಞಾನವನ್ನು ಹಾಗೂ ಆದಾಯವನ್ನು ವೃದ್ಧಿಸುವುದಕ್ಕೋಸ್ಕರ ಉತ್ತಮ ಗುಣಮಟ್ಟದ ಸಂಶೋಧನೆಯನ್ನು ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿಗಳಾದ ಶ್ರೀ ಸಿಎ ಎ ರಾಘವೇಂದ್ರ ರಾವ್ ರವರು ಮಾತನಾಡಿ, ಸಂಶೋಧನೆಯ ಮೂಲಕ ವಸ್ತುವಿನ ಅಥವಾ ವ್ಯವಸ್ಥೆಯ ಗಾತ್ರವನ್ನು ಕಿರಿದು ಮಾಡಿ, ಅದರ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ, ರಾಷ್ಟೀಯ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಹೇಳಿದರು
ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಸಂಶೋಧನೆಯು ಸಮಾಜದ ಪ್ರತಿಯೋರ್ವ ವ್ಯಕ್ತಿಗೂ ಹಾಗೂ ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದೆ ಎಂದು ಹೇಳಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ. ಪ್ರವೀಣ್ ಬಿ. ಎಂ. ರವರು ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವ ಸಂಶೋಧನೆಗಳ ಕಿರುಚಿತ್ರಣವನ್ನು ನೀಡಿದರು ಹಾಗೂ ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮಾಡಲು ವಿಫುಲ ಅವಕಾಶವಿದೆ ಎಂದು ಹೇಳಿದರು.
ಇಂಜಿನಿಯರಿಂಗ್ ವಿದ್ಯಾರ್ಥಿನಿಯರಾದ ಕುಮಾರಿ ಮಧುರಾ ಮತ್ತು ದೀಪಾಶ್ರೀ ಪ್ರಾರ್ಥನೆಯನ್ನು ಮಾಡಿದರು. ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಡಾ. ಬಿ ಹೆಚ್ ವಿ ಪೈ ಯವರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ತಾನ್ಯಾ ಗಿರೀಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರೊ. ಭವಾನಿ ಶಂಕರ್ ಧನ್ಯವಾದ ಸಮರ್ಪಣೆ ಮಾಡಿದರು. ಮೈಸೂರಿನ ಎಸ್.ಜೆ.ಸಿ.ಇ. ನ ಪ್ರೊ. ಪಿ.ಎಸ್.ರಘುಪ್ರಸಾದ್ ರವರು ತಾಂತ್ರಿಕ ಪ್ರಬಂಧಗಳನ್ನು ವಿಶ್ಲೇಷಿಸಿ, ತೀರ್ಪನ್ನು ನೀಡಿದರು.

Related Articles

Leave a Reply

Your email address will not be published.

Back to top button