ಸುದ್ದಿ

ಯಾವ ಜಿಲ್ಲೆಯಲ್ಲೂ ಕೊರೋನಾ ಪತ್ತೆಯಾಗಿಲ್ಲ- ಸಚಿವ ಶ್ರೀರಾಮುಲು…

ಮಂಗಳೂರು: ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಸಧ್ಯದ ಸ್ಥಿತಿಯಲ್ಲಿ ಯಾವ ಆತಂಕಗಳು ಜಿಲ್ಲೆಯಲಿಲ್ಲ, ಮಾತ್ರವಲ್ಲದೇ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಂಗಳೂರಿಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು , ರಾಜ್ಯಾದ್ಯಂತ ಕೊರೊನಾ ವೈರಸ್ ಆತಂಕ ಭಯ ಸೃಷ್ಟಿ ಮಾಡಿದೆ. ವಾಹನಗಳಲ್ಲಿ ಎಲ್‌ಇಡಿ ಬ್ಯಾನರ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಲ್ಲದೆ ಎನ್ ಎಂ ಪಿ ಟಿ ಹಾಗೂ ವಿಮಾನ ನಿಲ್ದಾಣದಲ್ಲಿ ಕಟ್ಟು ನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಯಾರು ವದಂತಿಗೆ ಕಿವಿಕೊಡಬಾರದು ಎಂದರು.

Related Articles

Leave a Reply

Your email address will not be published.

Back to top button