Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಯುವಕ ನಾಪತ್ತೆ – ದೂರು…

ಪುತ್ತೂರು: ಶಾಮಿಯಾನದ ಅಂಗಡಿಯೊಂದರಲ್ಲಿಕೆಲಸ ಮಾಡುತ್ತಿದ್ದ ಯುವಕನೋರ್ವ ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ತಡವಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಸೇಡಿಯಾಪು ಎಂಬಲ್ಲಿನ ನಿವಾಸಿ ಸುಂದರಿ ಎಂಬವರ ಪುತ್ರ ಬಾಬು(25) ನಾಪತ್ತೆಯಾದ ಯುವಕ. ಬಾಬು ಅವರ ತಾಯಿ ಸುಂದರಿ ಅವರು ದೂರು ನೀಡಿದವರಾಗಿದ್ದು, ನ.20ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಗಟ್ಟಕ್ಕೆ ಹೋಗಲಿದೆ ಎಂದು ತನ್ನಲ್ಲಿ ಹೇಳಿ ಹೋಗಿದ್ದ ಬಾಬು ನ.22ರಂದು ಫೋನ್ ಮಾಡಿದ್ದಾರೆ. ಅದಾದ ಬಳಿಕ ಅವರು ಮತ್ತೆ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಈ ಕುರಿತು ಸ್ಥಳೀಯ ಸಂಬಂಧಿಕರಲ್ಲಿ ವಿಚಾರಿಸಿದ್ದು ಪುತ್ರ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button