ಸುದ್ದಿ

ರಾಜ್ಯದಲ್ಲಿಂದು 7 ಮಂದಿಗೆ ಕೊರೋನಾ- ಒಟ್ಟು ಸೋಂಕಿತರ ಸಂಖ್ಯೆ 83 ….

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 7 ಕೋವಿಡ್​​-19 ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಉಡುಪಿಯ ಇಬ್ಬರು ಮತ್ತು ನಂಜನಗೂಡಿನ 5 ಜನರಲ್ಲಿ ಕೊರೋನಾ ಪತ್ತೆಯಾದ ಕಾರಣ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಇದುವರೆಗೂ ರಾಜ್ಯದಲ್ಲಿ 83 ಪ್ರಕರಣ ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ 41 ಕೊರೋನಾ ಪಾಸಿಟಿವ್ ಕೇಸ್​ಗಳಿವೆ. ನಂತರದ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಮತ್ತು ಮೈಸೂರು ಇವೆ.
ರಾಜ್ಯದಲ್ಲಿ ಬೆಳಕಿಗೆ ಬಂದಿರುವ 83 ಪಾಸಿಟಿವ್ ಪ್ರಕರಣಗಳ ಪೈಕಿ ಐವರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳ ಜಿಲ್ಲಾವಾರು ಪಟ್ಟಿ ಈ ಕೆಳಕಂಡಂತಿದೆ:

ಬೆಂಗಳೂರು – 41 ಪ್ರಕರಣ
ಚಿಕ್ಕಬಳ್ಳಾಪುರ – 8 ಪ್ರಕರಣ
ಮೈಸೂರು – 8 ಪ್ರಕರಣ
ದಕ್ಷಿಣ ಕನ್ನಡ – 7 ಪ್ರಕರಣ
ಉತ್ತರ ಕನ್ನಡ – 7 ಪ್ರಕರಣ
ಕಲಬುರಗಿ – 3 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 1 ಪ್ರಕರಣ
ತುಮಕೂರು – 1 ಪ್ರಕರಣ

Related Articles

Leave a Reply

Your email address will not be published.

Back to top button