ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ…

ಸುಳ್ಯ: ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಪೇರಡ್ಕ-ಗೂನಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಖ್ವೀಯತ್ತುಲ್ ಇಸ್ಲಾಂ ಮದರಸದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಖತೀಬ್ ಬಹುಮಾನ್ಯರಾದ ರಿಯಾಜ್ಹ್ ಫೈಝಿ ಎರುಮಾಡ್ ದು:ವಾಶೀರ್ವಚನ ನೀಡಿದರು. ಜಮಾಅತ್ ಅಧ್ಯಕ್ಷರಾದ ಜನಾಬ್ ಎಸ್.ಆಲಿ ಹಾಜಿಯವರು ಧ್ವಜಾರೋಹಣ ನೆರವೇರಿಸಿದರು ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಬ್ದುಲ್ ರಝಾಕ್ ಹಾಜಿ ತೆಕ್ಕಿಲ್ ಸ್ವಾಗತಿಸಿದರು.ಜಮಾಅತ್ ಖತೀಬರಾದ ಬಹು:ರಿಯಾಜ್ಝ್ ಫೈಝಿ ಉಸ್ತಾದ್ ರವರು ಸ್ವಾತಂತ್ರ್ಯ ಸಂದರ್ಭದಲ್ಲಿ ಪೂರ್ವಿಕರಾದ ಮುಸಲ್ಮಾನರು ನೀಡಿದಂತಹ ತ್ಯಾಗಗಳ ಕುರಿತು ಬಹಳ ಸವಿಸ್ತಾರವಾಗಿ ಸಂದೇಶ ಭಾಷಣ ಮಾಡಿದರು.
ಪೇರಡ್ಕ ಜಮಾಅತ್ ಗೌರವಾಧ್ಯಕ್ಷರಾದ ಟ.ಎಂ.ಶಾಹಿದ್ ತೆಕ್ಕಿಲ್ ಹಾಗೂ ಸಲಹಾ ಸಮಿತಿ ಸದಸ್ಯರಾದ ಎ.ಎ.ರಝಾಕ್ ಹಾಜಿ ತೆಕ್ಕಿಲ್ ರವರು ಸಂದೇಶ ಭಾಷಣ ಮಾಡಿದರು.ಈ ಸಂದರ್ಭ ಉಪಾಧ್ಯಕ್ಷರಾದ ಸಾಜಿದ್ ಅಝ್ಹರಿ ತೆಕ್ಕಿಲ್,ಕಮೀಟಿ ಸದಸ್ಯರಾದ ಟಿ.ಬಿ.ಹನೀಫ ತೆಕ್ಕಿಲ್,ಹಕೀಂ ಪೇರಡ್ಕ,ಜಮಾಅತ್ ಸದಸ್ಯರುಗಳಾದ ಟಿ.ಬಿ.ಅಬ್ದುಲ್ಲ ತೆಕ್ಕಿಲ್, ಹನೀಫ ಮೊಟ್ಟಂಗಾರ್, ಪಿ.ಕೆ.ಅಬ್ದುಲ್ಲ ಪುತ್ರಿ,ಇಬ್ರಾಹಿಂ ನಡುಬೈಲ್,ಸಲೀಂ ಅಲ್ತಾಫ್ ಗೂನಡ್ಕ,ಡಿ.ಎ.ಆಹ್ಮದ್ ಶೇಖ್ ಗೂನಡ್ಕ,ಸಲೀಂ ದರ್ಖಾಸ್, ಇರ್ಷಾದ್ ಪೇರಡ್ಕ,ಉಸ್ಮಾನ್ ಪಾಂಡಿ,ಸಿ.ಎಂ.ಇಬ್ರಾಹಿಂ ಚೇರೂರ್,ಜುನೈದ್ ಟಿ.ಬಿ,ಸಿದ್ದೀಕ್ ಮೂಲೆ,ಟಿ.ಎ.ರಝಾಕ್ ದರ್ಖಾಸ್,ಟಿ.ಎಂ.ಉಮ್ಮರ್ ತೆಕ್ಕಿಲ್,ಶಾಹಿಲ್ ದರ್ಖಾಸ್,ಇರ್ಫಾನ್ ಪೇರಡ್ಕ,ಸಫ್ವಾನ್ ದರ್ಖಾಸ್ ಪಿ.ಎ.ಅಶ್ರಫ್ ತೆಕ್ಕಿಲ್,ಶಾಫಿ ಕಲ್ಲುಗುಂಡಿ ಹಾಗೂ ಮದರಸ ವಿಧ್ಯಾರ್ಥಿಗಳು, ವಿಧ್ಯಾರ್ಥಿನಿಯರು ಭಾಗವಹಿಸಿದರು.ಮದರಸ ಸಹ ಅಧ್ಯಾಪಕರಾದ ಬಹು:ನೂರುದ್ದೀನ್ ಅನ್ಸಾರಿ ಉಸ್ತಾದರು ಸಂದೇಶ ಭಾಷಣ ಹಾಗೂ ವಂದನಾರ್ಪಣೆ ಮಾಡಿದರು.

Sponsors

Related Articles

Back to top button