ಸುದ್ದಿ

ರೋಟರಿ ಕ್ಲಬ್ ಸುಳ್ಯ: ಕುಟುಂಬ ಸಮ್ಮಿಲನ….

ಸುಳ್ಯ:ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ರೊ.ಪ್ರಭಾಕರನ್ ನಾಯರ್ ಅತಿಥ್ಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸ್ವಾಗತ್ ವಿಲ್ಲಾದಲ್ಲಿ ನ. 6 ರಂದು ನಡೆಯಿತು.
ಸುಳ್ಯ ರೋಟರಿ ಅಧ್ಯಕ್ಷ ರೊ.ಡಾ. ಪುರುಷೋತ್ತಮ ಕೆ.ಜಿ. ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ಗವರ್ನರ್ ಲ| ಎಂ.ಬಿ.ಸದಾಶಿವ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರೊ.ಡಾ.ಕೇಶವ ಪಿ.ಕೆ. ರೋಟರಿ ಸುಳ್ಯ ಸಿಟಿಯ ಅಧ್ಯಕ್ಷ ರೊ.ಭಾನುಪ್ರಕಾಶ್, ಇನ್ನರ್ ವೀಲ್ ಅಧ್ಯಕ್ಷೆ, ರೊ. ಡಾ. ಹರ್ಷಿತ ಪುರುಷೋತ್ತಮ ಭಾಗವಹಿಸಿ ಶುಭ ಹಾರೈಸಿದರು. ರೊ. ಸನತ್, ರೊ. ಗುರುವಿಕ್ರಂ, ರೊ. ಗುರುರಾಜ್, ರೊ.ದಯಾನಂದ ಆಳ್ವ, ಹಾಗೂ ರೊ.ಪ್ರಭಾಕರನ್ ನಾಯರ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button