ರೋಟರಿ ಸುಳ್ಯ ಸ್ವರ್ಣ ಮಹೋತ್ಸವ ಕಾಮಗಾರಿಗೆ ಚಾಲನೆ…
ಸುಳ್ಯ: ರೋಟರಿ ಸಂಸ್ಥೆ ಸುಳ್ಯ ಇದರ ಸ್ವರ್ಣ ಮಹೋತ್ಸವದ ಪ್ರಯುಕ್ತ ದ್ವಿತೀಯ ಹಂತದ ಕಾಮಗಾರಿಗೆ ಬಾಳುಗೋಡಿನ ಬೆಟ್ಟುಮಕ್ಕಿ ಕ್ರೀಡಾಂಗಣದಲ್ಲಿ ಸುಮಾರು 4ಲಕ್ಷ ರೂಪಾಯಿ ಅಂದಾಜಿನಲ್ಲಿ ಬಯಲು ರಂಗಮಂದಿರ ಹಾಗೂ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಶಿಲಾನ್ಯಾಸವನ್ನು ಸುಳ್ಯ ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಡಾ.ಪುರುಷೋತ್ತಮ್ ನೆರವೇರಿಸಿದರು.
ಕಾರ್ಯಕ್ರಮ ನೇತೃತ್ವ ವಹಿಸಿದ ರೋಟರಿ ಸ್ವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ರೊ.ಸೀತಾರಾಮ ರೈ ಸವಣೂರು ಅವರು ಮಾತನಾಡಿ ಸಮಾಜದಿಂದ ಗಳಿಸಿದ ಸಂಪತ್ತಿನ ಒಂದು ಭಾಗವನ್ನಾದರು, ಸಮಾಜಕ್ಕೆ ನೀಡಿದಾಗ ಆತ್ಮ ಸಂತೃಪ್ತಿ ಸಾಧ್ಯ. ಈ ನಿಟ್ಟಿನಲ್ಲಿ ರೊ. ಡಾ. ಪುರುಷೋತ್ತಮ್ ರವರು ಹಾಗೂ ಅವರ ಮನೆಯವರು ಇಂದಿನ ಕಾರ್ಯಕ್ರಮಕ್ಕೆ ನೀಡಿದ ಬೆಂಬಲ ಹಾಗೂ ಸಹಾಯ ಸರ್ವರಿಗೂ ಮಾದರಿ, ಇಂತಹ ಯೋಜನೆಯನ್ನು ಸುಳ್ಯ ರೋಟರಿಯು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವಂಗತ ಕಟ್ಟೆಮನೆ ಗಿರಿಯಪ್ಪ ಗೌಡ ರವರ ಮನೆಯವರು ರಂಗಮಂದಿರಕ್ಕೆ ಶೇಕಡ 50ರಷ್ಟು ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿದರು. ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ರೊ. ಡಾ.ಕೇಶವ ಪಿ.ಕೆ., ಬಾಳುಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಿಮ್ಮತ್ ಕೆ.ಸಿ., ರೋಟರಿ ಸ್ವರ್ಣ ಮಹೋತ್ಸವ ವರ್ಷದ ಅಧ್ಯಕ್ಷರಾದ ರೊ. ಗುರುರಾಜ್ ವೈಲಾಯ, ಇನ್ನರ್ವ್ಹೀಲ್ ಅಧ್ಯಕ್ಷೆ ರೊ. ಡಾ.ಹರ್ಷಿತಾ ಪುರುಷೋತ್ತಮ್, ಶ್ರೀಮತಿ ಸಾವಿತ್ರಿ ಕಟ್ಟೆಮನೆ, ಶಿರಾಡಿ ದೈವಸ್ಥಾನದ ಮೊಕ್ತೇಸರರಾದ ಜಯರಾಮ ಅಲ್ಕಬೆ, ರೊ.ಗಣೇಶ್ ಭಟ್, ರೊ. ದಯಾನಂದ ಆಳ್ವ, ರೊ. ಮೀನಾಕ್ಷಿ ಗೌಡ, ರೊ. ಕಸ್ತೂರಿ ಶಂಕರ್, ರೊ. ಗಿರಿಜಾಶಂಕರ್, ರೊ. ಸತೀಶ್ ಕೆ.ಜಿ. ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ, ವಸಂತ ಕಿರಿಭಾಗ, ಇಂಜಿನಿಯರ್ಗಳಾದ ವಿಜಯ ಕುಮಾರ್ ಹಾಗೂ ರಾಧಾ ಕಟ್ಟೆಮನೆ ಉಪಸ್ಥಿತರಿದ್ದರು.