Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135
ಲಕ್ಷಾಂತರ ರೂ ಮೌಲ್ಯದ ಕೃಷ್ಣ ಮೃಗದ ಕೊಂಬು ವಶ.... - VarthaLoka
ಸುದ್ದಿ

ಲಕ್ಷಾಂತರ ರೂ ಮೌಲ್ಯದ ಕೃಷ್ಣ ಮೃಗದ ಕೊಂಬು ವಶ….

ಬಂಟ್ವಾಳ: ಅಳವಿನಂಚಿನಲ್ಲಿರುವ ವನ್ಯ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆ ಮೃಗದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಒರ್ವನನ್ನು ವಳವೂರು ಎಂಬಲ್ಲಿ ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದವರು ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಜ. 21 ರಂದು ನಡೆದಿದೆ.
ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ಗಂಗಾದರ ಅವರ ಮಗ ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ. ಬಂಧಿತನ ಕೈಯಿಂದ ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಲಕ್ಷಾಂತರ ರೂ ಮೌಲ್ಯದ
ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆ ಮೃಗದ 4 ಕೊಂಬುಗಳು ಒಟ್ಟು 6 ಕೊಂಬುಗಳು ಮತ್ತು 3 ಲಕ್ಷ ಮೌಲ್ಯದ ಕಾರನ್ನು ವಸಪಡಿಸಿಕೊಳ್ಳಲಾಗಿದೆ.ದಿಲೀಪ್ ಕುಮಾರ್ ಮಂಗಳೂರು ಕಡೆಯಿಂದ ಮಾರಾಟ ಮಾಡುವ ಉದ್ದೇಶದಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಬೆ ಗ್ರಾಮದ ಬಂಟರಭವನದ ಬಳಿ ವಳವೂರು ಎಂಬಲ್ಲಿ ದಾಳಿ ನಡೆಸಿದ ಅರಣ್ಯ ಸಂಚಾರಿ ಪೊಲೀಸರು ಹಾಗೂ ಬಂಟ್ವಾಳ ಆರಣ್ಯ ಅಧಿಕಾರಿಗಳು ಆರೋಪಿ ಹಾಗೂ ಸ್ವತ್ತನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ‌
ಸಿ.ಐ.ಡಿ.ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ! ರವೀಂದ್ರ ನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅದೀಕ್ಷಕರಾದ ಸುರೇಶ್ ಬಾಬು ಅವರ ಮಾರ್ಗದರ್ಶನ ದಲ್ಲಿ, ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರದ ಪಿ.ಎಸ್.ಐ ಪುರುಷೋತ್ತಮ, ಸಿಬ್ಬಂದಿ ಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿ ಗಳಾದ ಪ್ರೀತಂ, ವಿನಯ್, ಜಿತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button