Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ವಿದ್ಯಾರಂಭ….

ಬಂಟ್ವಾಳ:ಶ್ರೀರಾಮ ಶಿಶುಮಂದಿರ ಕಲ್ಲಡ್ಕದ ವತಿಯಿಂದ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸ ದ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗಣಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮ ಪೂಜನೀಯ ಶ್ರೀ ಮಾತನಂದಮಯಿ ಸ್ವಾಮಿನಿ ಇವರು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುವಂತಹ 5 ಶಿಶುಮಂದಿರಗಳ ಒಟ್ಟು73 ಮಕ್ಕಳಿಗೆ ಅಕ್ಷರಾಬ್ಯಾಸ ಮಾಡಿಸಿ ಶುಭ ಹಾರೈಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಭಟ್, ನಾರಾಯಣ ಸೊಮಾಯಾಜಿ, ವಸಂತ ಮಾಧವ ಶ್ರೀಮಾನ್, ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯಂತಿ ಮಾತಾಜಿ ಸ್ವಾಗತಿಸಿ, ಶಶಿಪ್ರಭಾ ಮಾತಾಜಿ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button