ಸುದ್ದಿ

ವಿವಿಧ ಕಾಮಗಾರಿಗಳ ಉದ್ಘಾಟನೆ…

ಬಂಟ್ವಾಳ: ಶಾಸಕನಾಗಿ ಇರಲಿ ಅಥವಾ ಇಲ್ಲದಿರಲಿ, ಒಳ್ಳೆಯ ಕೆಲಸಗಳ ಜೊತೆ ಯಾವಾಗಲೂ ನಾನಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಬಂಟ್ವಾಳ ತಾಲೂಕು ವಿಟ್ಲ ಮುಡ್ನರು ಗ್ರಾಮದ ಏಮಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಅನುದಾನದಲ್ಲಿ ಸುಮಾರು 14 ಲಕ್ಷ ವೆಚ್ಚದ ನಿರ್ಮಾಣಗೊಳ್ಳಲಿರುವ ಕಲಿಕಾ ಕೊಠಡಿಯ ಶಿಲಾನ್ಯಾಸ ಮಾಡಿ, ಮುತ್ತೊಟ್ಟು ಫೈನಾನ್ಸ್ ವತಿಯಿಂದ ನಿರ್ಮಿಸಲ್ಪಟ್ಟ ಬಾಲವನ, ಹಾಗೂ ವಿಟ್ಲ ಮುಡ್ನರು ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಿಸಲ್ಪಟ್ಟ ಶಾಲಾ ಆವರಣ ಗೋಡೆ ಹಾಗೂ ಆಟದ ಮೈದಾನ ವಿಸ್ತರಣೆ, ಶ್ರೀಯುತ ಹರೀಶ್ ಮುಜಾಲ ಒದಗಿಸಿಕೊಟ್ಟ ಬಾಸ್ಕೆಟ್ ಬಾಲ್ ಕ್ರೀಡಾ ಸಲಕರಣೆ ಮೊದಲಾದ ಕಾಮಗಾರಿಗಳನ್ನು ಉದ್ಘಾಟಿಸಿ ಮಾತಾಡಿದರು.
ತನ್ನ ಕ್ಷೇತ್ರದ ಹಳ್ಳಿ ಪ್ರದೇಶದ ಏಮಾಜೆ ಶಾಲೆಯನ್ನು ಬಾಲವನ ನಿರ್ಮಿಸಲು ಆಯ್ಕೆ ಮಾಡಿ ಬಹಳ ಸುಂದರವಾಗಿ ಬಾಲವನ ನಿರ್ಮಿಸಿಕೊಟ್ಟ ಮುತ್ತೂಟ್ ಫೈನಾನ್ಸಿನ ಸಂಸ್ಥೆಯನ್ನು ಶಾಸಕರು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಟ್ಲ ಮುಟ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಗೆ ಸಹಕರಿಸಿದ ವಿವಿಧ ಗಣ್ಯರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಕೀಲಾ ಕೃಷ್ಣ ಮಿತ್ತಕೋಡಿ, ಪಂಚಾಯತ್ ಸದಸ್ಯರಾದ ಸವಿತಾ ಡಿ ಪೂಜಾರಿ, ಧನಂಜಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ ಮೈಕೆ, ಮುತ್ತೂಟ್ ಫೈನಾನ್ಸಿನ ಪುತ್ತೂರುಕ್ಲಸ್ಟರ್ ಮೆನೇಜರ್ ಸಂದೇಶ್ ಶೇನೈ, ಪುತ್ತೂರು ಬ್ರಾಂಚ್ ಮ್ಯಾನೇಜರ್ ನವೀನ್ ಎ, ಶ್ರೀ ಪ್ರಸಾದ್ ಕುಮಾರ್ ಮೆನೇಜರ್ ಸಿ ಎಸ್ ಆರ್ ಮಂಗಳೂರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನುಷಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ರಮೇಶ್ ಸ್ವಾಗತಿಸಿ, ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕಿಯರು ಸಹಕರಿಸಿದರು.

Advertisement

Related Articles

Back to top button