ಕಟ್ಟೆಕ್ಕಾರ್ ಅಬ್ಬಾಸ್ ಹಾಜಿ ನಿಧನ….

ಸುಳ್ಯ: ಅನ್ಸಾರ್ ಅನಾಥಾಲಯದ ಸ್ಥಾಪಕಾಧ್ಯಕ್ಷ , ಹಿರಿಯ ಉದ್ಯಮಿ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಸೆ.29 ರ ರಾತ್ರಿ ನಿಧನರಾದರು.
ಅನ್ಸಾರ್ ಸಂಸ್ಥೆಯ ಅಧ್ಯಕ್ಷರಾಗಿ, ಗಾಂಧಿನಗರ ಜುಮಾ ಮಸೀದಿ ಉಪಾಧ್ಯಕ್ಷರಾಗಿ, ವರ್ತಕ ಸಂಘದ ಪದಾಧಿಕಾರಿಯಾಗಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಭಾನುವಾರ ಸಂಜೆ ಅನಾರೋಗ್ಯ ಉಲ್ಬಣಗೊಂಡ ಕಾರಣ ಅವರನ್ನು ಸುಳ್ಯದ ಕೆಜಿವಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರು ಪತ್ನಿ , ಮೂವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button