ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ದ್ವಿತೀಯ ಸಮಗ್ರ ಪ್ರಶಸ್ತಿ….

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ 3 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದುಕೊಂಡು ಪುರುಷರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೀದರಿನ ಗುರುನಾನಕ್‍ದೇವ್ ಇಂಜಿನಿಯರಿಂಗ್ ಕಾಲೇಜು ಮತ್ತು ಚಿಕ್ಕಬಳ್ಳಾಪುರದ ಎಸ್‍ಜೆಐಸಿಟಿ ಕಾಲೇಜಿನಲ್ಲಿ ನಡೆದ ಈ ಆಟೋಟ ಸ್ಪರ್ಧೆಯಲ್ಲಿ ಒಟ್ಟು 37 ಅಂಕಗಳೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
110 ಮೀ ಹರ್ಡಲ್ಸ್‍ನಲ್ಲಿ ಪ್ರತೀಕ್ ಗೌಡ, 20 ಕಿಮೀ ನಡಿಗೆಯಲ್ಲಿ ನಚಿಕೇತ್.ಎಂ, 4ಘಿ100 ಮೀ ರಿಲೇ ಸ್ಪರ್ಧೆಯಲ್ಲಿ ಆದರ್ಶ್.ಎಸ್.ಪಿ, ನಿಖಿಲ್.ಜಿ, ಮೊಹಮ್ಮದ್ ಯೂಸುಫ್ ಬುಲ್‍ಬುಲೇ ಹಾಗೂ ರಾಹುಲ್ ಅವರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಟ್ರಿಪಲ್‍ಜಂಪ್ ನಲ್ಲಿ ಆದರ್ಶ್.ಎಸ್.ಪಿ, 400ಮೀ ಹರ್ಡಲ್ಸ್‍ನಲ್ಲಿ ನಿಖಿಲ್.ಜಿ, ಡೆಕತ್ಲಾನ್ ಹಾಗೂ ಜಾವೆಲಿನ್‍ಥ್ರೋ ನಲ್ಲಿ ಮೊಹಮ್ಮದ್ ಯೂಸುಫ್ ಬುಲ್‍ಬುಲೇ ಹಾಗೂ ಹ್ಯಾಮ್ಮರ್‍ಥ್ರೋ ನಲ್ಲಿ ನಿಖಿಲ್.ಜಿ ಬೆಳ್ಳಿ ಪದಕದ ಸಾಧನೆಯನ್ನು ಮಾಡಿದ್ದಾರೆ.
20 ಕಿಮೀ ನಡಿಗೆಯಲ್ಲಿ ಲಕ್ಷ್ಮೀಶ ಹಾಗೂ 110 ಮೀ ಹರ್ಡಲ್ಸ್‍ನಲ್ಲಿ ಸೂರಜ್.ಬಿ.ರೈ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
16 ಹುಡುಗರು ಮತ್ತು 2 ಹುಡುಗಿಯರನ್ನೊಳಗೊಂಡ ಕಾಲೇಜಿನ ತಂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಮರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button