ಸುದ್ದಿ

ಶ್ರೀಕ್ಷೇತ್ರ ನಂದಾವರ ನದಿ ತೀರ ತಡೆಗೋಡೆ ಕಾಮಗಾರಿಗೆ ಚಾಲನೆ….

ಬಂಟ್ವಾಳ : ಐತಿಹಾಸಿಕ ಮಹತ್ವದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ನೇತ್ರಾವತಿ ನದಿ ತೀರ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅನುಮೋದನೆಯಂತೆ ನ. 25ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.
ಕ್ಷೇತ್ರದ ದೇವರಾದ ಶ್ರೀ ವಿನಾಯಕ ದೇವರ ಎದುರಲ್ಲಿ ಪ್ರಾರ್ಥಿಸಿ, ಸ್ಥಳದಲ್ಲಿ ಭೂಮಿ ಪೂಜೆ ನೆರೆವೇರಿಸಿ ಅನುಗ್ರಹ ಪ್ರಸಾದವನ್ನು ಗುತ್ತಿಗೆದಾರ ನಾಗರಾಜ್ ನಾಯಕ್ ಮತ್ತು ಮೇಲ್ವಿಚಾರಕ ಗಣೇಶ್ ಕಾಮಾಜೆ ಅವರಿಗೆ ನೀಡಿ ಕೆಲಸ ವಿಘ್ನ ರಹಿತವಾಗಿ ನಿಗದಿತ ಅವ„ಯಲ್ಲಿ ಕೆಲಸ ಮುಕ್ತಾಯಕ್ಕೆ ಬರುವಂತೆ ಹಾರೈಸಲಾಯಿತು.
ಪುರೋಹಿತ ವೇ| ಮೂ| ಮಹೇಶ್ ಭಟ್, ಕ್ಷೇತ್ರದ ಸಮಿತಿ ಸದಸ್ಯರಾದ ಎಸ್. ಗಂಗಾಧರ ಭಟ್ ಕೊಳಕೆ, ಡಾ| ಎಸ್.ಎಮ್. ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ್ ಪೂಜಾರಿ, ಅಣ್ಣು ನಾಯ್ಕ, ಲೊಕೋಪಯೋಗಿ ಇಲಾಖೆ ಇಂಜಿನಿಯರ್ ಶಿವಪ್ರಸನ್ನ ಮತ್ತು ಭಜಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button