ಮಂಗಳವಾರ- ದ.ಕ 8 , ಉಡುಪಿ 11 ಹಾಗೂ ರಾಜ್ಯದಲ್ಲಿ 322 ಕೊರೊನ ಪಾಸಿಟಿವ್…

ಮಂಗಳೂರು: ಇಂದು(ಮಂಗಳವಾರ) ದ.ಕ ಜಿಲ್ಲೆಯಲ್ಲಿ 8 , ಉಡುಪಿ ಜಿಲ್ಲೆಯಲ್ಲಿ 11 ಹಾಗೂ ರಾಜ್ಯದಲ್ಲಿ 322 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 142 ಮಂದಿಯ ವರದಿ ಲಭ್ಯವಾಗಿದ್ದು, ಈ ಪೈಕಿ 8 ಮಂದಿಯ ವರದಿ ಪಾಸಿಟಿವ್ ಆಗಿದೆ.ಜಿಲ್ಲೆಯಲ್ಲಿ 6 ಮಂದಿ ಗುಣಮುಖರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 11 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1088ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 5 ಮಂದಿ ಮಹಾರಾಷ್ಟ್ರ ದಿಂದ ಬಂದಿದ್ದು, ಇಬ್ಬರು ಕುವೈಟ್, ಮತ್ತು ತಲಾ ಒಬ್ಬರು ದುಬಾಯಿ ಮತ್ತು ಸೌದಿ ಆರೇಬಿಯಾದಿಂದ ಬಂದವರಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 322 ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕು ಸಂಬಂಧಿತ ಕಾರಣಗಳಿಂದ 8 ಜನರು ಸಾವನ್ನಪ್ಪಿದ್ದಾರೆ.ಬೆಂಗಳೂರು 107 , ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪುರ 16, ಯಾದಗಿರಿ 13 , ಬೀದರ್ 15, ಕಲಬುರಗಿ 11, ದಾವಣಗೆರೆ ಹಾಗೂ ವಿಜಯಪುರ ತಲಾ 07 ಪ್ರಕರಣಗಳು ಪತ್ತೆಯಾಗಿದೆ.
ಕಾಸರಗೋಡಿನಲ್ಲಿ ಇಂದು ಯಾವುದೇ ಹೊಸ ಕೊರೊನ ಪ್ರಕರಣ ದಾಖಲಾಗಿಲ್ಲ.

Sponsors

Related Articles

Leave a Reply

Your email address will not be published. Required fields are marked *

Back to top button