Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಶ್ರೀ ಗುಡ್ಡೆ ಚಾಮುಂಡಿ, ಪಂಜುರ್ಲಿ ,ಮಲೆಕೊರತಿ ದೈವಗಳ ಚಾವಡಿಯ ಶಿಲಾನ್ಯಾಸ ….

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಅಂತರಗುತ್ತು ಶ್ರೀ ಗುಡ್ಡೆ ಚಾಮುಂಡಿ, ಪಂಜುರ್ಲಿ ,ಮಲೆಕೊರತಿ ದೈವಗಳ ಚಾವಡಿಯ ಶಿಲಾನ್ಯಾಸ ಕಾರ್ಯಕ್ರಮ ಗ್ರಾಮ ತಂತ್ರಿಗಳಾದ ಪಳನೀರು ಅನಂತ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು.
ವಿಟ್ಲ- ಕಲ್ಲಡ್ಕ ರಾಜ್ಯ ಹೆದ್ದಾರಿ ಮದ್ಯದಲ್ಲಿ ಎರ್ಮೆಮಜಲು ಎಂಬಲ್ಲಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಸುಳ್ಳಮಲೆ ತಪ್ಪಲಲ್ಲಿ ಈ ಅಂತರ ಗುತ್ತು ಚಾವಡಿ ಇದ್ದು.ಈಗ ಗ್ರಾಮದೈವಕ್ಕೆ ಸಂಬಂಧಿಸಿದ ನಾಲ್ಕು ಗುತ್ತು- ಮೂರು ಗ್ರಾಮದ ಒಂಭತ್ತು ಚಾವಡಿ ಮತ್ತು ಹದಿನಾರು ಕಂಬಳದ ಮುಖ್ಯಸ್ತರು ಸೇರಿದಂತೆ ಗ್ರಾಮಸ್ತರನ್ನೊಳಗೊಂಡ ಅಭಿವೃದ್ಧಿ ಸಮಿತಿಯು ಸುಮಾರು ಅಂದಾಜು 75 ಲಕ್ಷ ರು ವೆಚ್ಚದಲ್ಲಿ ಈ ಚಾವಡಿಯ ಪುನರ್ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡುವ ಪುಣ್ಯ ಕಾರ್ಯಕ್ಕೆ ಚಿಂತನೆ ನಡೆಸಿದೆ. ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಸರ್ವ ಸದಸ್ಯರು, ಹೆಚ್ಚಿನ ಗ್ರಾಮಸ್ಥರು ಭಾಗವಹಿಸಿದ್ದರು.

 

Related Articles

Leave a Reply

Your email address will not be published. Required fields are marked *

Back to top button