ಸುದ್ದಿ

ಶ್ರೀ ಶಂಕರ ಪತ್ತಿನ ಸಹಕಾರಿ ಸಂಘ ನಿ. ಪಾಲು ಬಂಡವಾಳ ಬಿಡುಗಡೆ…

ಬಂಟ್ವಾಳ:ನೂತನವಾಗಿ ಪ್ರಾರಂಭಗೊಂಡಿರುವ ಶ್ರೀ ಶಂಕರ ಪತ್ತಿನ ಸಹಕಾರಿ ಸಂಘ ನಿ. ಮೆಲ್ಕಾರ್ ಇದರ ಪ್ರಥಮ ಪಾಲು ಬಂಡವಾಳ ಬಿಡುಗಡೆ ಕಾರ್ಯಕ್ರಮವು ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ನಂದಾವರ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಮಹೇಶ ಭಟ್ ಪ್ರಾರ್ಥನೆ ನೆರವೇರಿಸಿ ಪ್ರಥಮ ಪಾಲು ಬಂಡವಾಳವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಪ್ರಸ್ತಾವನೆ ಗೈದರು. ಪ್ರವರ್ತಕರಾದ ಜಯಾನಂದ ಪೆರಾಜೆ, ಜಯರಾಮ ಶೇಖ ಪೀಲ್ಯಡ್ಕ, ಮುರಳೀಧರ ರಾವ್, ಸುಬ್ರಮಣ್ಯ ಭಟ್ , ಮಂಜುನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button