ಸುದ್ದಿ
ಸಂಪಾಜೆ ಗ್ರಾ ಪಂ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಭೇಟಿ…

ಸುಳ್ಯ: ಸಂಪಾಜೆ ಗ್ರಾಮದ ಪ್ರಮುಖ ಸಮಸ್ಯೆಗಳಾದ ಹೂಳೆತ್ತುವಿಕೆ, ಅಡಿಕೆ ಹಳದಿ ರೋಗದಿಂದ ಕೃಷಿಕರಿಗೆ ಆಗಿರುವ ತೊಂದರೆ, ನದಿಗಳಿಗೆ ತಡೆಗೋಡೆ ನಿರ್ಮಾಣ, ಪ್ಲಾಟಿಂಗ್ ಸಮಸ್ಯೆ, ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಗುರುತು,ಕಳೆದ ಮಳೆಗಾಲದಲ್ಲಿ ಆದ ವಿಫತ್ತುಗಳ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ನೇತೃತ್ವದಲ್ಲಿ ಸಂಪಾಜೆ ಕೃಷಿಕರಾದ ಕೊಂದಲಕಾಡ್ ನಾರಾಯಣ ಭಟ್, ರವಿಶಂಕರ್ ಭಟ್, ಸತ್ಯನಾರಾಯಣ ಭಟ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಯುವ ಮುಖಂಡ ರಹೀಮ್ ಬೀಜದಕಟ್ಟೆ ನಿಯೋಗದಲ್ಲಿ ಮಾನ್ಯ ಜಿಲ್ಲಾಧಿಕಾರಿ ರವಿಕುಮಾರ್ ರವರನ್ನು ನಾಲ್ಕೂರು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಭೇಟಿಯಾಗಿ ಮನವಿ ನೀಡಿ ಗಮನ ಸೆಳೆದರು. ಕೃಷಿಕರ ಸಮಸ್ಯೆ ಬಗ್ಗೆ ರವಿಶಂಕರ್ ಭಟ್ ಗಮನ ಸೆಳೆದರು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಲ್ಲುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

Advertisement