ಸುದ್ದಿ

ಸನಾತನ ಧರ್ಮದ ಉಳಿವಿಗೆ ಭಜನೆ ಪೂರಕ – ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ …

ಬಂಟ್ವಾಳ:ಸನಾತನ ಧರ್ಮದ ಉಳಿವಿಗೆ ಭಜನೆ ಪೂರಕವಾಗಿದ್ದು ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿಸುತ್ತದೆ. ಭಗವಂತನನ್ನು ಭಕ್ತಿಯಿಂದ ಹೃದಯ ಪೂರ್ವಕವಾಗಿ ನಾಮ ಸ್ಮರಣೆ ಮಾಡಿ ಯಾವುದೇ ಒಳ್ಳೆಯ ಕಾರ್ಯ ಮಾಡಿದರೂ ದೇವರಿಗೆ ಸಮರ್ಪಣೆಯಾಗುತ್ತದೆ ಎಂದು ಉಪ್ಪಳದ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಅವರು ಇರಾ ಗ್ರಾಮ ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶುಕ್ರವಾರ ಭಜನಾ ಸಪ್ತಾಹದ ಅಂಗವಾಗಿ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಟಕಪೂರ್ವಾಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಜನೆಯಿಂದ ಶಾಂತಿ ನೆಮ್ಮದಿಯ ಜೊತೆಗೆ ಮನೋಲ್ಲಾಸ ಉಂಟಾಗುತ್ತದೆ.ನಂಬಿಕೆಯಿಂದ ಮಾಡುವ ಸಾಮೂಹಿಕ ಪ್ರಾರ್ಥನೆ ಉತ್ತಮ ಫಲವನ್ನು ಕೊಡುತ್ತದೆ ಎಂದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಾಸ್ತವಿಕವಾಗಿ ಮಾತನಾಡಿ ಸಂಘಟನೆ, ಸಂಸ್ಕಾರ, ಲೋಕ ಕಲ್ಯಾಣಾರ್ಥವಾಗಿ ಅಖಂಡ ಭಜನಾ ಸಪ್ತಾಹವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಪುಣ್ಯವಂತರು ಎಂದರು.
ವೇದಿಕೆಯಲ್ಲಿ ಭಜನಾ ಸಮಿತಿಯ ಗೌರವಾಧ್ಯಕ್ಷ ವಿಠಲಪ್ರಭು, ಪ್ರಧಾನ ಕಾರ್ಯದರ್ಶಿ ಸತೀಶ ಕುಕ್ಕಾಜೆ ಬೈಲು ಮಾತನಾಡಿ ಭಜನಾ ಸಪ್ತಾಹದ ಯಶಸ್ಸಿಗೆ ಭಾಗಿಗಳಾದ ಭಜನಾ ಮಂಡಳಿಗಳನ್ನು ಅಭಿನಂದಿಸಿದರು.
ಸಂದೇಶ ಕುಕ್ಕಾಜೆ ಬೈಲು ಸ್ವಾಗತಿಸಿ, ತಿರುಮಲೇಶ್ವರ ಕೈಯೂರು ನಿರೂಪಿಸಿ, ಶೇಖರ್ ಡಿ. ವಂದಿಸಿದರು.

Related Articles

Leave a Reply

Your email address will not be published.

Back to top button