ಸುದ್ದಿ

ಸರಪಾಡಿಯಲ್ಲಿ ಕೆಸರ್‍ದ ಕಂಡೊಡು ತುಳುವರೆ ಗೊಬ್ಬುಲು -2019 ….

ಬಂಟ್ವಾಳ: ಆಶೀರ್ವಾದ ಗೆಳೆಯರ ಬಳಗ ಪೆರ್ಲ ಬಿಯಪಾದೆ ಸರಪಾಡಿ ಹಾಗೂ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ಎನ್.ಸುಬ್ಬಣ್ಣ ಶೆಟ್ಟಿ ಇವರ ಸ್ಮರಣಾರ್ಥ ಕೆಸರ್‍ದ ಕಂಡೊಡು ತುಳುವೆರೆ ಗೊಬ್ಬುಲು ಕಾರ್ಯಕ್ರಮವು ದ.15 ರಂದು ಸರಪಾಡಿಯಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಲಕ್ ಶಾಂತಿ ಬಾಪುಕೋಡಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 9.30ಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಮಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಉದ್ಘಾಟಿಸಲಿದ್ದು ಮಾಜಿ ಸಚಿವ ಬಿ.ರಮಾನಾಥ ರೈ ಮೊದಲಾದವರು ಅತಿಥಿಗಳಾಗಿರುತ್ತಾರೆ. ವಿಜಯ ಶೆಟ್ಟಿ ಸಾಲೆತ್ತೂರು ವಿಚಾರ ಗೋಷ್ಠಿ ನಡೆಸಿಕೊಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರ ಕರಿಂಜೆ ಮೂಡಬಿದ್ರಿಯ ಶ್ರೀಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅಧ್ಯಕ್ಷತೆ ವಹಿಸಲಿದ್ದು ಶಾಸಕ ರಾಜೇಶ್ ನಾಯ್ಕ್, ಹರಿಕೃಷ್ಣ ಬಂಟ್ವಾಳ ಮೊದಲಾದವರು ಅತಿಥಿಗಳಾಗಿರುತ್ತಾರೆ.
ಲೋಕೇಶ್ ಪೂಜಾರಿ, ಗಿರೀಶ್ ಕೋಟ್ಯಾನ್ , ರಘುರಾಮ ಕೋಟ್ಯಾನ್ , ಮಧ್ವರಾಜ್ ಕಲ್ಮಾಡಿ, ಮೋಹನ್ ಪೂಜಾರಿ ಉಪಸ್ಥಿತರಿದ್ದರು.

 

Related Articles

Leave a Reply

Your email address will not be published.

Back to top button