ಸುದ್ದಿ

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು – AIESEC ಇಂಡಿಯಾದೊಂದಿಗೆ ಒಪ್ಪಂದ….

ಮಂಗಳೂರು:ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಇಂಟರ್ನ್ಶಿಪ್ ನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮತ್ತು ಎಐಇಎಸ್ಇಸಿ ಇಂಡಿಯಾ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಯುವಜನರಿಗೆ ನಾಯಕತ್ವದ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಜಾಗತಿಕ ವೇದಿಕೆಯನ್ನು ಈ ಒಪ್ಪಂದ ಒದಗಿಸಲಿದೆ.
ಈ ಒಪ್ಪಂದಕ್ಕೆ ಸಹ್ಯಾದ್ರಿ ಕಾಲೇಜ್ ಪ್ರಾಂಶುಪಾಲರಾದ ಡಾ. ಆರ್ ಶ್ರೀನಿವಾಸ ರಾವ್ ಕುಂಟೆ ಮತ್ತು ಕಾಲೇಜಿನ ಕೈಗಾರಿಕಾ ಸಂಪರ್ಕದ ಅಧಿಕಾರಿ ಡಾ. ಅನುಷ್ ಬೆಕಲ್ ಅವರು ವ್ಯಾಪಾರ ವಿಸ್ತರಣಾ ಮುಖ್ಯಸ್ಥರಾದ ಧ್ರುವರಾಜ್ ಸಿಂಗ್ ರಾಜ್ವೀ ಮತ್ತು ಎಐಇಎಸ್ಇಸಿ (ಸಿ) ಯ ಉದ್ಯಮಶೀಲತೆ ವಿನಿಮಯ ಕೇಂದ್ರದ ಸದಸ್ಯ ಮನನ್ ಷಾ ಅವರೊಂದಿಗೆ ಸಹಿ ಹಾಕಿದರು. ಈ ಸಂಸ್ಥೆ ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎಂಐಟಿ ಕ್ಯಾಂಪಸ್, ಮಣಿಪಾಲ್ ನಲ್ಲಿ ಇದೆ.

Related Articles

Leave a Reply

Your email address will not be published. Required fields are marked *

Back to top button