ಸಹ್ಯಾದ್ರಿ ಎಂಬಿಎ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ…..
ಮಂಗಳೂರು: ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ಕಾಲೇಜಿಗೆ ಕರೆತರಲು, ಅಧ್ಯಾಪಕರೊಂದಿಗೆ ಸಮಯವನ್ನು ಕಳೆಯಲು, ಸಹ್ಯಾದ್ರಿ ಎಂಬಿಎ ಬಿಭಾಗದ ವತಿಯಿಂದ “ದಸ್ ಸಾಲ್ ಕೆ ಬಾದ್” ಹಳೆಯ ವಿದ್ಯಾರ್ಥಿ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಯಿತು.
ಡೀನ್-ಸ್ಟ್ರಾಟೆಜಿಕ್ ಪ್ಲಾನಿಂಗ್ ಪ್ರೊ.ರಮೇಶ್ ಕೆ ಜಿ ಸ್ವಾಗತಿಸಿದರು ಮತ್ತು ಎಂಬಿಎ ನಿರ್ದೇಶಕ ಡಾ. ವಿಶಾಲ್ ಸಮರ್ಥಾ ಅವರು ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸಹ್ಯಾದ್ರಿ ಇತ್ತೀಚಿನ ಬೆಳವಣಿಗೆಗಳು ಮತ್ತು ಉಪಕ್ರಮಗಳನ್ನು ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಹ್ಯಾದ್ರಿ ಎಂಬಿಎ ಪ್ರಧಮ ಬ್ಯಾಚ್ ನ ಹಳೆಯ ವಿದ್ಯಾರ್ಥಿ ಪ್ರಸ್ತುತ ನೊರ್ತೆರ್ನ್ ಟ್ರಸ್ಟ್ ನಲ್ಲಿ ಹಿರಿಯ ವ್ಯವಹಾರ ಪ್ರಕ್ರಿಯೆ ಸುಧಾರಣಾ ವಿಶ್ಲೇಷಕರಾಗಿರುವ ರೂಪೇಶ್ ಸಾಲಿಯನ್ ಭಾಗವಹಿಸಿದ್ದರು. ಸಹ್ಯಾದ್ರಿ ಪ್ರಾಂಶುಪಾಲ ಡಾ. ಆರ್. ಶ್ರೀನಿವಾಸ ರಾವ್ ಕುಂಟೆ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡುಹೋಗಲು ಸಹಕಾರ ನೀಡಬೇಕು ಎಂದು ಹೇಳಿದರು.
ನಂತರ ಹಳೆಯ ವಿದ್ಯಾರ್ಥಿಗಳು, ಎಂಬಿಎ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಹಳೆಯ ವಿದ್ಯಾರ್ಥಿಗಳು ಸಹ್ಯಾದ್ರಿಯ ವಿದ್ಯಾರ್ಥಿಗಳಾಗಿ ತಮ್ಮ ಅನುಭವಗಳನ್ನು ಮತ್ತು ನೆನಪುಗಳನ್ನು ಹಂಚಿಕೊಂಡರು.
ಸಂಸ್ಥೆಯ ಬೆಳವಣಿಗೆಯನ್ನು ವೈಯಕ್ತಿಕವಾಗಿ ವೀಕ್ಷಿಸಲು, ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಸಂಸ್ಥೆ ಮಾಡುತ್ತಿರುವ ಪ್ರಗತಿಯನ್ನು ಗಮನದಲ್ಲಿಟ್ಟುಕೊಳ್ಳಲು ಎಂಬಿಎ ವಿಭಾಗ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸುತ್ತದೆ.