ಮಜಿ ಸರಕಾರಿ ಪ್ರಾಥಮಿಕ ಶಾಲೆ – ಶಿಕ್ಷಕಿ ಶ್ರೀಮತಿ ಸಿಸಿಲಿಯಾ ಅವರಿಗೆ ಬೀಳ್ಕೊಡುಗೆ…

ಬಂಟ್ವಾಳ:ಶಿಕ್ಷಕ ನು ತನ್ನ ವಿದ್ಯಾರ್ಥಿಗಳನ್ನು ಜ್ಞಾನ, ಕೌಶಲ, ಮತ್ತು ಸಕಾರಾತ್ಮಕ ನಡವಳಿಕೆಯೊಂದಿಗೆ ಸಜ್ಜುಗೊಳಿಸುತ್ತಾನೆ. ಅದನ್ನು ವಿದ್ಯಾರ್ಥಿ ಯು ಎಂದಿಗೂ ಕಳೆದುಕೊಳ್ಳುದಿಲ್ಲ, ಶಿಕ್ಷಕ ಜ್ಞಾನದ ಅರಿವು ಮೂಡಿಸುತ್ತಾರೆ ಒಬ್ಬ ಒಳ್ಳೆಯ ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತಾನೆ ಎಂದು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ಸಿಸಿಲಿಯಾ ರವರು ಸುಧೀರ್ಘ 24 ವರ್ಷಗಳ ಕಾಲ ಮಜಿ ಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ದಿನದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಜಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಶ್ರೀಯುತ ಸಂಜೀವ ಮೂಲ್ಯ ರವರು ಮಾತನಾಡಿದರು.

ದೇಹ, ವಿಧ್ಯೆ ಸುಂದರತೆಯ ಕೆಲಸದ ಸಂಪತ್ತು ಜೀವನದ ಸಾಥ೯ಕತೆಯನ್ನು ಉಂಟುಮಾಡುತ್ತದೆ ಪಠ್ಯದ ಜೊತೆಗೆ ಜೀವನದ ಮೌಲ್ಯಗಳನ್ನು ತುಂಬುವ ಗುರು ಮಗುವಿನ ಮೇಲೆ ಉತ್ತಮ ಪ್ರಭಾವ ಬೀರುತ್ತಾನೆ ಎಂದು ಕಾಯ೯ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಜ್ಜಾನೇಶ್ ರವರು ಮಾತನಾಡಿದರು.

ಶಿಕ್ಷಕ ನೆಂದರೆ ಕೇವಲ ಪಾಠ ಬೋಧಿಸುವವರಲ್ಲ ಸನ್ಮಾರ್ಗ ದಲ್ಲಿ ನಡೆಯುವಂತೆ ದಾರಿ ತೋರುವ ಮಾಗ೯ದಶ೯ಕರು, ಅದೇರೀತಿ ಶಾಲೆಯ ಶಿಕ್ಷಕರ ನಡತೆಯು ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಕಾಯ೯ಕ್ರಮದ ಅತಿಥಿ ಯಾಗಿ ಭಾಗವಹಿಸಿದ ಸನ್ಮಾನಿತ ಶಿಕ್ಷಕಿ ಯ ಸಹೋದರ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯ ದ ಪ್ರಾಚಾರ್ಯರು ಹಾಗೂ ಪದನಿಮಿತ ಸಹ ನಿರ್ದೇಶಕರು
ಆದ ಡಾ | ಸಿಪ್ರಯನ್ ಮೊಂತೇರೋ ರವರು ಶಿಕ್ಷಕಿಯನ್ನು ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶ್ರೀಯುತ ಸಂತೋಷ್ ಕುಮಾರ್, ಸುನೀಲ್ ಸಿಕ್ವೇರಾ, ಶ್ರೀಪತಿ ನಾಯಕ್ , ಇಸ್ಮಾಯಿಲ್, ಯತೀಶ್, ಶಶಿ ಹಾಗೂ ಸುನೀತಾ ರೈ ರವರು ಹಾಜರಿದ್ದು ಶಿಕ್ಷಕರ ಸಂಘದ ವತಿಯಿಂದ ಗುರುಭ್ಯೋ ನಮಃ: ಕಾಯ೯ಕ್ರಮ ನೆರವೇರಿಸಿದರು.
ತದನಂತರ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ಪಂಚಾಯತ್ ಸದಸ್ಯರ ವತಿಯಿಂದ, ಶಿಕ್ಷಕಿಯನ್ನು ಸನ್ಮಾನಿಸಲಾಯಿತು.
ಶಾಲಾ ಅತಿಥಿ ಶಿಕ್ಷಕಿಯರು, ಅಡುಗೆ ಸಿಬ್ಬಂದಿಗಳು, ಶಾಲಾ ಮಕ್ಕಳು ಶಿಕ್ಷಕಿಗೆ ಕೊಡುಗೆಗಳನ್ನು ನೀಡಿ ಗೌರವಿಸಿದರು.

ಕಾಯ೯ಕ್ರಮದಲ್ಲಿ ಸನ್ಮಾನಿತ ಶಿಕ್ಷಕಿ ಸಿಸಿಲಿಯಾ ರವರು ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ, ಸಿಬ್ಬಂದಿ ಯವರಿಗೆ, ಶಾಲೆಗೆ ನೆನಪಿನ ಕಾಣಿಕೆಯನ್ನು ನೀಡಿದರು.

ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ, ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಸನ್ಮಾನಿತ ಶಿಕ್ಷಕಿಯ ಪತಿ ವೆಲೇರಿಯನ್ ವೆಗಸ್,ಮಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಶಕುಂತಲಾ, ಶಿಕ್ಷಣ ಸಂಯೋಜಕಿ ಆಗಿ ಸೇರಿ ಸಲ್ಲಿಸಿ ನಿವೃದ್ಧರಾದ ಪುಷ್ಪ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಮಕ್ಕಳು, ಮಕ್ಕಳ ಪೋಷಕರು, ಸಂಘ-ಸಂಸ್ಥೆಗಳ ಸದಸ್ಯರುಗಳು, ಶಾಲಾ ಹಿರಿಯ ವಿದ್ಯಾರ್ಥಿಗಳು, ಹಾಜರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಹ ಶಿಕ್ಷಕಿ ಅನುಷಾ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಶಿಕ್ಷಕಿಯರು ಸಹಕರಿಸಿದರು.

whatsapp image 2023 03 01 at 4.19.33 pm
whatsapp image 2023 03 01 at 4.19.32 pm
whatsapp image 2023 03 01 at 4.19.32 pm (1)
Sponsors

Related Articles

Back to top button