ಸುದ್ದಿ

ಸುರತ್ಕಲ್ ಎನ್‌ಐಟಿಕೆ ಟೋಲ್ ಮುಂದುವರಿಕೆ????….

ಮಂಗಳೂರು: ಎನ್‌ಐಟಿಕೆ ಟೋಲ್ ರದ್ದು ಇನ್ನೊಂದು ಅವಧಿಗೂ ಭರವಸೆಯಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
ಈಗಿನ ಟೋಲ್ ಗುತ್ತಿಗೆ ಅವಧಿ ಮುಕ್ತಾಯದ ಹಂತ ತಲುಪಿದ್ದು, ಹೆದ್ದಾರಿ ಇಲಾಖೆ ಮರುಟೆಂಡರ್ ಆಹ್ವಾನಿಸಿರುವುದರಿಂದ ಟೋಲ್‌ಗೇಟ್ ರದ್ದು ಇಲ್ಲವೇ ಹೆಜಮಾಡಿ ಟೋಲ್‌ನೊಂದಿಗೆ ವಿಲೀನ ಸಾಧ್ಯತೆ ಇಲ್ಲವಾಗಿದೆ. ಅಗರ್‌ವಾಲ್ ಕಂಪನಿ ಅವಧಿ ನ.18ಕ್ಕೆ ಮುಕ್ತಾಯವಾಗಲಿದ್ದು, ಅ.31ರಿಂದ ಬಿಡ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ನ.7 ಕೊನೆಯ ದಿನವಾಗಿದೆ.
ಟೋಲ್ ರದ್ದಾಗುವುದೇ ಇಲ್ಲವೋ, ಟೋಲ್‌ಗೇಟ್ ಬಳಿ ಹೆದ್ದಾರಿ ಬಳಕೆದಾರರಿಗೆ ಹೆದ್ದಾರಿ ಅವ್ಯವಸ್ಥೆ ದರ್ಶನವಂತೂ ಆಗುತ್ತಿದೆ. ದಿನಕ್ಕೆ 9 ಲಕ್ಷ ರೂ.ಗೆ ಮಿಕ್ಕಿ ಟೋಲ್ ಸಂಗ್ರಹಿಸುವ ಎನ್‌ಎಚ್‌ಎಐಗೆ ಟೋಲ್ ಬಳಿಯೇ ಬಿದ್ದಿರುವ ಹೊಂಡಗಳು ಗೋಚರಿಸುತ್ತಿಲ್ಲ.

Related Articles

Leave a Reply

Your email address will not be published.

Back to top button