ಸುದ್ದಿ

ಸುಳ್ಯದ ಸ್ನೇಹ ಶಾಲೆಯಲ್ಲಿ ವಿಭಿನ್ನವಾಗಿ ಶಿಕ್ಷಕರ ದಿನಾಚರಣೆ…..

ಸುಳ್ಯ: ಸ್ನೇಹ ಶಾಲೆ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶಿಕ್ಷಕಿಯರನ್ನು ವೇದಿಕೆಯಲ್ಲಿ ಕೂರಿಸಿ ವಿದ್ಯಾರ್ಥಿನಿಯರು ಆರತಿ ಎತ್ತಿ, ಪುಷ್ಪ ನೀಡಿ, ಅರಸಿನ ಕುಂಕುಮ ಹಚ್ಚಿ ವಂದಿಸಿದರು. ಈ ಸಂದರ್ಭದಲ್ಲಿ ಹೆತ್ತವರೂ ಭಾಗವಹಿಸಿದ್ದು ಮಾತೆಯರೂ ಮುಂದೆ ಬಂದು ಶಿಕ್ಷಕರಿಗೆ ಆರತಿ ಎತ್ತಿದರು. ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕ ವೃಂದದದವರಿಗೆ ಪುಸ್ತಕಗಳ ಉಡುಗೊರೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಿರೀಶ ಭಾರದ್ವಾಜ, ಶಾಲಾ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button