ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಯಾಗಿ ಅಬುಶಾಲಿ ಗೂನಡ್ಕ ನೇಮಕ…

ಸುಳ್ಯ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆ. ಪಿ. ಸಿ. ಸಿ ಅಲ್ಪಸಂಖ್ಯಾತ ಘಟಕದ ಉಸ್ತುವಾರಿಯಾಗಿ ಕೆ. ಪಿ. ಸಿ. ಸಿ ಕಾರ್ಯದರ್ಶಿಯು ದ. ಕ ಸಂಪಾಜೆ ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಕ್ರಿಯಾಶೀಲ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಅಬುಶಾಲಿ ಗೂನಡ್ಕ ನೇಮಕ ವಾಗಿದ್ದಾರೆ.
ಇವರು ಮಡಿಕೇರಿ ಕಾಟಕೇರಿ ಗ್ರಾಮದ ಮದೆನಾಡು ಗ್ರಾಮ ಪಂಚಾಯತಿಗೆ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ದುಡಿದಿದ್ದಾರೆ. ಮದೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಮದೆನಾಡು ವಲಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಎನ್.ಎಸ್. ಯು.ಐ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ದುಡಿದ ಇವರು 1998 ಸಾಲಿನಲ್ಲಿ ಕೊಡಗು ಜಿಲ್ಲಾ ಯುವ ಪ್ರಶಸ್ತಿ ವಿಜೇತರಾಗಿದ್ದಾರೆ, ಹತ್ತಾರು ಸಂಘಟನೆಗಳಲ್ಲಿ ದುಡಿದ ಅನುಭವವಿದ್ದು. ಇಂದಿಗೂ ಆ ಭಾಗದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಕಾಂಗ್ರೆಸ್ ಪಕ್ಷದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ವರ್ಷದಿಂದ ಸಕ್ರಿಯವಾಗಿ ದುಡಿದು ತನ್ನದೇ ಆದ ರೀತಿಯಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದು ಅಪಾರ ಅಭಿಮಾನಿಗಳನ್ನು ಎರಡು ಜಿಲ್ಲೆಯಲ್ಲೂ ಹೊಂದಿದ್ದಾರೆ.ಸಂಪಾಜೆ ಗ್ರಾಮದ ಗೂನಡ್ಕ ಪರಿಸರದಲ್ಲಿ ಎರಡು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ದುಡಿಯುತ್ತಿರುವುದನ್ನು ಮನಗೊಂಡು ಕೆ.ಪಿ.ಸಿ.ಸಿ ಯ ಉಸ್ತುವಾರಿಯಾಗಿ ನೇಮಕ ಮಾಡಲು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹಾಗೂ ಕಾನೂನು ಮಾನವ ಹಕ್ಕುಗಳ ಘಟಕದ ರಾಜ್ಯ ಅಧ್ಯಕ್ಷರಾದ ಎ ಎಸ್ ಪೊನ್ನಣ್ಣ ಅವರ ಶಿಫಾರಸಿನ ಮೇರೆಗೆ ರಾಜ್ಯದಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಜಬ್ಬಾರ್ ಅವರು ನೇಮಕ ಮಾಡಿದ್ದು ಕೂಡಲೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ವರದಿ ಒಪ್ಪಿಸಲು ಆದೇಶಿಸಿದ್ದಾರೆ.

Sponsors

Related Articles

Back to top button