ಸುದ್ದಿ

ಸುಳ್ಯ: ನಾಲ್ವರು ಹಿರಿಯ ಶಿಕ್ಷಕರಿಗೆ ‘ಮಲೆನಾಡ ಸಿರಿ’ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ….

ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ರಿ.) ಸಹಯೋಗದೊಂದಿಗೆ ನೀಡುವ ‘ಮಲೆನಾಡ ಸಿರಿ’ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಸುಳ್ಯ ತಾಲೂಕಿನ ನಾಲ್ವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಮಕ್ಕಳಿಗೆ “ಗಣಿತ ಮನೆ ಪಾಠ’ ಹೇಳಿಕೊಟ್ಟು ಆನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾದ ಕರ್ನಾಟಕ ಅಭಿವೃದ್ಧಿ ನಿಗಮದ ನಿವೃತ್ತ ಕಛೇರಿ ಅಧೀಕ್ಷಕರಾದ ದಯಾನಂದ ಉಚ್ಛಿಲ, ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿ ರಾಜ್ಯಮಟ್ಟದಲ್ಲೇ ಉತ್ತಮ ಅಧಿಕಾರಿ ಎಂದು ಗುರುತಿಸಲ್ಪಟ್ಟು ಉತ್ತಮ ಸಮನ್ವಯಾಧಿಕಾರಿ ಎಂಬ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಪೇರಾಲ್, ಶೈಕ್ಷಣಿಕ ಕರ್ತವ್ಯದ ಜೊತೆಗೆ ಶಶಾಂಕ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರತೀ ವರ್ಷ ನೆರವು ನೀಡುತ್ತಿರುವ ಏನೆಕಲ್ಲು ಗ್ರಾಮದ ಬಾನಡ್ಕ ಶಾಲೆಯ ಶಿಕ್ಷಕಿ ಜಾನಕಿ.ಕೆ, ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸುಳ್ಯ ಜ್ಯೂನಿಯರ್ ಕಾಲೇಜಿನ ನಟರಾಜ್ ಮಾಸ್ತರ್ ರವರು ಮಲೆನಾಡ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೆ.9ರಂದು ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಕುಂಞಿ ಅಹಮ್ಮದ್ ರವರು ‘ಮಲೆನಾಡ ಸಿರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ತಾಲೂಕು ವೈದ್ಯಾಧಿಕಾರಿ ಡಾ. ಬಾನುಮತಿ, ಕೆ.ವಿ.ಜಿ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎನ್.ಎ.ಜ್ಞಾನೇಶ್, ಹಿರಿಯ ಉದ್ಯಮಿ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್, ಜನತಾ ಗ್ರೂಪ್ಸ್ ನ ಕೆ.ಎಂ.ಮಸ್ತಫ, ಹಮೀದ್ ಜನತಾ, ಮಜೀದ್ ಜನತಾ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ರಿ.) ಇದರ ಅಧ್ಯಕ್ಷರಾದ ಉಮ್ಮರ್ ಬೀಜದಕಟ್ಟೆ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಭಾನುಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button